ಕಳಂಜ: ಶ್ರೀ ರಕ್ಷ ಗೊಂಚಲಿನ ಮಹಾಸಭೆ

0


ಶ್ರೀ ರಕ್ಷ ಗೊಂಚಲಿನ ಮಹಾಸಭೆ ನ. 5ರಂದು ಅಯ್ಯನಕಟ್ಟೆ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಹಿಳೆಯರಿಗೆ ಆಟೋಟ ಸ್ಪರ್ಧೆಗಳಾದ ಲಿಂಬೆಚಮಚ ಓಟ, ಬಲೂನ್ ಹೊಡಿಯುವುದು, ಕ್ಯಾಂಡಲ್ ಉರಿಸುವುದು, ಬಾಲ್ ಪಾಸಿಂಗ್, ಜಾನಪದ ಗೀತೆ ಹಾಗೂ ಸ್ತ್ರೀ ಶಕ್ತಿಯ ಅತ್ಯುತ್ತಮ ಸಂಘದ ಆಯ್ಕೆಯ ಸ್ಪರ್ಧೆಗಳು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೊಂಚಲಿನ ಅಧ್ಯಕ್ಷೆ ಶ್ರೀಮತಿ ಯಶೋಧ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಮತ್ತು ಶ್ರೀಮತಿ ಪ್ರೇಮಲತಾ, ಬ್ಲಾಕ್ ಸೊಸೈಟಿ ಉಪಾಧ್ಯಕ್ಷೆ ಸುಜಾತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶ್ರೀಮತಿ ಉಷಾ, ಆರೋಗ್ಯ ಸುರಕ್ಷಾ ಅಧಿಕಾರಿ ಶ್ರೀಮತಿ ಬೇಬಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಮತ್ತು ಗೊಂಚಲಿನ ಸದಸ್ಯರು ಹಾಜರಿದ್ದರು. ಗೊಂಚಲಿನ ಸದಸ್ಯೆ ಶ್ರೀಮತಿ ನೇತ್ರಾವತಿ ಸ್ವಾಗತಿಸಿದರು. ಗೊಂಚಲಿನ ಕಾರ್ಯದರ್ಶಿ ಪುಷ್ಪಾವತಿ ಕಿಲಂಗೋಡಿಯವರು ಕಾರ್ಯಕ್ರಮ ನಿರೂಪಿಸಿದರು.

ಮಧ್ಯಾಹ್ನದ ಭೋಜನದ ನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.