ಕಸಾಪ ಸಾಹಿತ್ಯ ಸಂಭ್ರಮದ 6ನೇ ಕಾರ್ಯಕ್ರಮ

0


ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸುವಿಚಾರ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ ಆಂಗವಾಗಿ ನಡೆಯುತ್ತಿರುವ ಸಾಹಿತ್ಯ ಸಂಭ್ರಮ-2022ರ 6 ನೇ ಕಾರ್ಯಕ್ರಮ ಸುಳ್ಯದ ಪರಿಶಿಷ್ಠ ವರ್ಗಗಳ ಮೆಟ್ರಿಕ್ ನಂತರದ ಮತ್ತು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ನಡೆಯಿತು.


ಜಿಲ್ಲಾ ಸಾಹಿತ್ಯ ಪರಿಷತ್ತಿನ ಪ್ರತಿನಿಧಿಯಾದ ಶ್ರೀ ರಾಮಚಂದ್ರ ಪಲ್ಲತಡ್ಕ ದೀಪ ಬೆಳಗಿಸಿ ಕನ್ನಡಾಂಬೆಗೆ ಆರತಿ ಎತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
“ಕನ್ನಡ ಸಾಹಿತ್ಯವನ್ನು ಯುವ ಜನರು ಓದಬೇಕು.ಶ್ರೀಮಂತ ಕನ್ನಡ ಸಂಸ್ಕೃತಿಯ ಪರಿಚಯ ನಮಗಾಗಬೇಕು. ನಮ್ಮ ಭಾಷೆಯ ಬಗೆಗೆ ಅಭಿಮಾನ- ಹೆಮ್ಮೆ ಕನ್ನಡಿಗರಾದ ನಮಗೆಲ್ಲರಿಗೂ ಇರಬೇಕು” ಎಂದು ಅವರು ಹೇಳಿದರು.


ಸಂಪನ್ಮೂಲ ವ್ಯಕ್ತಿ ಶ್ರೀ ಶಿವಣ್ಣ ಕೊಳ್ಳೆಗಾಲ.ಸುಳ್ಯ ತಾಲೂಕು ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ,
ಸದಸ್ಯರಾದ ಜಯರಾಮ ಶೆಟ್ಟಿ ದುಗಲಡ್ಕ,ಸಂಕೀರ್ಣ.ಎ.ಎಲ್,ಸುವಿಚಾರ ವೇದಿಕೆಯ ಸದಸ್ಯರಾದ ಶ್ರೀಮತಿ ರೇಖಾ ಶೇಟ್,ವಸತಿ ನಿಲಯದ ಮೇಲ್ವಿಚಾರಕರಾದ ಶ್ರೀಮತಿ ಕಾವ್ಯ ಮತ್ತು ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಮಾರಿ ರಕ್ಷಾ ಪ್ರಾರ್ಥನೆ ಗೈದರು.
ಕ.ಸಾ‌.ಪ ಕಾರ್ಯಕಾರಿ ಸಮಿತಿ ಸದಸ್ಯೆ ಚರಿಷ್ಮಾ ಕಡಪಳ ಸ್ವಾಗತಿಸಿ,ವಸತಿ ನಿಲಯದ ಮೇಲ್ವಿಚಾರಕಿ ಶ್ರೀಮತಿ ಕಾವ್ಯ ಧನ್ಯವಾದಗೈದರು.


ಶ್ರೀಮತಿ ಶಶ್ಮಿ ಭಟ್ ಅಜ್ಜಾವರ ಕಾರ್ಯಕ್ರಮ ಸಂಯೋಜಿಸಿ ನಿರೂಪಿಸಿದರು.
ಜನಪದ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರವನ್ನು ಬಣ್ಣಿಸುವ ಮಹಿಳಾ ಸಾಹಿತ್ಯ ಸಂಭ್ರಮವನ್ನು ಶಿಕ್ಷಕ,ಗಾಯಕ ಶ್ರೀ ಶಿವಣ್ಣ ಕೊಳ್ಳೆಗಾಲ ನಡೆಸಿಕೊಟ್ಟರು.