ಅಡ್ಕಾರ್ ಇಲೆಕ್ಟ್ರಾನಿಕ್ಸ್ ದಸರಾ-ದೀಪಾವಳಿ ಧಮಾಕ; ಬಂಪರ್ ಬಹುಮಾನ ಡ್ರಾ

0


ಸುಳ್ಯದ ಪ್ರಸಿದ್ಧ ಇಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಮಳಿಗೆ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ದಸರಾ- ದೀಪಾವಳಿ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯ ಬಂಪರ್ ಬಹುಮಾನ ಡ್ರಾವನ್ನು ನ.5 ರಂದು ನೆರವೇರಿಸಲಾಯಿತು.
ನಿವೃತ್ತ ಯೋಧ ಕ್ಯಾ.ಜನಾರ್ದನ ರಾವ್ ಪ್ರಥಮ ವಿಜೇತರನ್ನು ಆಯ್ಕೆ ಮಾಡಿ ಸಂಸ್ಥೆಗೆ ಶುಭ ಹಾರೈಸಿದರು.ಶ್ಯಾಮ್ ಲ್ಯಾಬ್ ನ ಮಾಲಕರಾದ ಶ್ಯಾಮ್ ಭಟ್, ಸುದ್ದಿ ಮಾಹಿತಿ ವಿಭಾಗದ ಮುಖ್ಯಸ್ಥ ಕೃಷ್ಣ ಬೆಟ್ಟ ದ್ವಿತೀಯ ಮತ್ತು ತೃತೀಯ ಡ್ರಾ ನೆರವೇರಿಸಿದರು.


ಪ್ರಥಮ ಬಹುಮಾನ 55″ ಎಲ್ ಇ ಡಿ ಟಿವಿಯನ್ನು ಭಾನುಪ್ರಕಾಶ್ ಹಾಲೆಮಜಲು ಪಡೆದುಕೊಂಡರು. ದ್ವಿತೀಯ ಬಹುಮಾನ ಡಬ್ಬಲ್ ಡೋರ್ ಫ್ರಿಡ್ಜನ್ನು ತಿಮ್ಮಯ್ಯ ಉಜಿರಡ್ಕ ನಾಲ್ಕೂರು, ತೃತೀಯ ಬಹುಮಾನ ವುಡನ್ ಕಾಟ್ ನ್ನು ಶಶಿಧರ ಚುಕ್ರಡ್ಕ ಅರಂತೋಡು ವಿಜೇತರಾದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ದಿನೇಶ್ ಅಡ್ಕಾರ್ ಹಾಗೂ ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು. ಸುದ್ದಿ ವರದಿಗಾರ ರಮೇಶ್ ನೀರಬಿದಿರೆ ನಿರೂಪಿಸಿದರು.