ಗಾಂಧಿನಗರ :ಎಸ್ ವೈ ಎಸ್, ಎಸ್ ಎಸ್ ಎಫ್ ವತಿಯಿಂದ ತಾಜುಲ್ ಉಲಮಾ ಅನುಸ್ಮರಣೆ

0

ಸುಳ್ಯ ತಾಲೂಕು ಸಂಯುಕ್ತ ಜಮಾಅತ್ ನ ಖಾಝಿಗಳು, ಖ್ಯಾತ ಧಾರ್ಮಿಕ ವಿದ್ವಾಂಸ ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್ ಅಲ್ ಬುಖಾರಿ (ಖ.ಸಿ) ರವರ ಅನುಸ್ಮರಣೆ ಕಾರ್ಯಕ್ರಮ ಸುಳ್ಯ ಗಾಂಧಿನಗರ ಕೇಂದ್ರ ಜುಮಾ ಮಸೀದಿಯಲ್ಲಿ ನವಂಬರ್ 4 ರಂದು ಜರುಗಿತು.


ತಾಜುಲ್ ಉಲಮಾ ರವರ 9ನೇ ಆಂಡ್ ನೇರ್ಚೆ ಹಾಗೂ ಈ ತಿಂಗಳಲ್ಲಿ ಅಗಲಿದ ಸುನ್ನತ್ ಜಮಾಅತ್ ನ ಉಲಮಾರ ಹೆಸರಿನಲ್ಲಿ ದುಆ ಮಜ್ಲಿಸ್ ನಡೆಯಿತು.

ಸುಳ್ಯ ಕೇಂದ್ರ ಜುಮಾ ಮಸ್ಜಿದ್ ಖತೀಬರಾದ ಅಶ್ರಫ್ ಕಾಮಿಲ್ ಸಖಾಫಿ ನೇತೃತ್ವದಲ್ಲಿ ದುವಾ ಮಜ್ಲೀಸ್ ನೇತೃತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಗಾಂಧಿನಗರ ಜುಮಾ ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಮುಸ್ತಫಾ ಜನತಾ, ಸಮಿತಿ ಪದಾಧಿಕಾರಿಗಳು, ಮುಅಲ್ಲಿಮ್ ವೃಂದದವರು ನೂರಾರು ಮುಸಲ್ಮಾನ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನೀಡಲಾಯಿತು.