ಬಿಳಿಯಾರು ಬಳಿ ಬೈಕಿಗೆ ಜೀಪು ಡಿಕ್ಕಿ -ಬೈಕ್ ಸವಾರ ಗಾಯ ಆಸ್ಪತ್ರೆಗೆ ದಾಖಲು

0

ಅರಂತೋಡು ಗ್ರಾಮದ ಬಿಳಿಯಾರು ಪೆಟ್ರೋಲ್ ಬಂಕ್ ಬಳಿ ರಾಜ್ಯ ಹೆದ್ದಾರಿಯಲ್ಲಿ ಬೈಕಿಗೆ ಜೀಪು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇದೀಗ ವರದಿ ಯಾಗಿದೆ.

ಸಂಪಾಜೆಯ ಕಲ್ಲುಗುಂಡಿ ಕಡೆಯಿಂದ ಸುಳ್ಯ ಕಡೆಗೆ ಧನಂಜಯ ಆಲೆಟ್ಟಿ ಎಂಬ ಯುವಕ ತನ್ನ ಅಪಾಚಿ ಬೈಕಿನಲ್ಲಿ ಬರುತ್ತಿರುವಾಗ ಸುಳ್ಯ ಕಡೆಯಿಂದ ತೊಡಿಕಾನ ಕಡೆಗೆ ಹರೀಶ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಜೀಪು ಬಸ್ಸನ್ನು ಓವರ್ ಟೆಕ್ ಮಾಡುವ ಸಂದರ್ಭದಲ್ಲಿ ವಿರುದ್ದ ದಿಕ್ಕಿನಿಂದ ಬಂದು ಡಿಕ್ಕಿ ಹೊಡೆಯಿತು. ಪರಿಣಾಮ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡರು. ತಕ್ಷಣ ಸ್ಥಳೀಯ ಯುವಕರು ಅಂಬ್ಯುಲೆನ್ಸ್ ಗೆ ಕರೆ ಮಾಡಿ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದರು. ವೈದ್ಯರು ಪರೀಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ತಲೆಗೆ ಹಾಗೂ ಕೈಗೆ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವಂತೆ ಸಲಹೆ ನೀಡಿದರು. ವೈದ್ಯರ ಸಲಹೆ ಮೇರೆಗೆ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಬೈಕ್ ಸವಾರ ಧನಂಜಯರವರು ಸಂಪಾಜೆ ಕಲ್ಲುಗುಂಡಿ ಪ್ರಾ .ಕೃ.ಪ.ಸ.ಸಂಘದ ಉದ್ಯೋಗಿಯಾಗಿದ್ದಾರೆ.