ಕೆ.ವಿ.ಜಿ. ನರ್ಸಿಂಗ್ ಕಾಲೇಜಿನ ಜಿ.ಎನ್.ಎಂ.‌ ನರ್ಸಿಂಗ್ ಗೆ ಶೇ‌‌ 99 ಫಲಿತಾಂಶ

0

ಕರ್ನಾಟಕ ರಾಜ್ಯ ಶುಶ್ರೂಷ ಪರೀಕ್ಷಾ ಮಂಡಳಿ ಬೆಂಗಳೂರು ನಡೆಸಿದ ಅಂತಿಮ ವರ್ಷದ ಡಿಪ್ಲೊಮಾ ಇನ್ ಜಿ.ಎನ್.ಎಂ. ಪರೀಕ್ಷೆಯಲ್ಲಿ ಕೆ.ವಿ.ಜಿ. ನರ್ಸಿಂಗ್ ಸಂಸ್ಥೆಯು ಶೇ. 99 ಫಲಿತಾಂಶ ದಾಖಲಿಸಿದೆ. ವಿದ್ಯಾರ್ಥಿಗಳಾದ ಅನ್ನಕುಟ್ಟಿ ಜೋಸೆಫ್ ಮತ್ತು ಸೌರವ್ ಸಾಹು ವಿಶಿಷ್ಠ ಶ್ರೇಣಿಯೊಂದಿಗೆ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಎ.ಒ.ಎಲ್.ಇ. ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ನರ್ಸಿಂಗ್ ಸಂಸ್ಥೆಯ ಪ್ರಾಂಶುಪಾಲರು ಅಭಿನಂದಿಸಿದ್ದಾರೆ.