ಸಾಹಿತ್ಯ ಸಂಭ್ರಮ ಸಮಾರೋಪ, ಬೆಳದಿಂಗಳ ಕವಿ ಕಾವ್ಯ ಗಾಯನ ಗೋಷ್ಠಿ ಗೀತಾ ಮೋಂಟಡ್ಕ, ಡಾ.ಹಿಮಕರ, ದುರ್ಗಾಕುಮಾರ್ ನಾಯರ್‌ಕೆರೆಗೆ ಸನ್ಮಾನ

0

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸುವಿಚಾರ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ನಡೆಸಿದ ಒಂದು ವಾರದ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಸಮಾರೋಪ ನಿನ್ನೆ ಜಟ್ಟಿಪಳ್ಳದ ದಯಾನಂದ ಆಳ್ವರ ಪದ್ಮಶ್ರೀ ಮನೆಯ ವಠಾರದಲ್ಲಿ ನಡೆಯಿತು.
ಇದರ ಅಂಗವಾಗಿ ಬೆಳದಿಂಗಳ ಕವಿ, ಕಾವ್ಯ ಗಾಯನ ಗೋಷ್ಠಿ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.


ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ.ಪ್ರಭಾಕರ ಶಿಶಿಲ ಸಮಾರೋಪ ಭಾಷಣಗೈದರು. ಇದೇ ಸಂದರ್ಭದಲ್ಲಿ ಮೂವರು ಸಾಧಕರನ್ನು ಸನ್ಮಾನಿಸಲಾಯಿತು. ರಂಗಭೂಮಿ ಕ್ಷೇತ್ರದ ಸಾಧನೆಗಾಗಿ ಶ್ರೀಮತಿ ಗೀತಾ ಮೋಂಟಡ್ಕ, ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ.ಹಿಮಕರ ಕುರುಂಜಿ ಹಾಗೂ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ದುರ್ಗಾಕುಮಾರ್ ನಾಯರ್‌ಕೆರೆಯವರನ್ನು ಸನ್ಮಾನಿಸಲಾಯಿತು. ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಸನ್ಮಾನ ನೆರವೇರಿಸಿದರು. ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಕಾರ್ಯಕ್ರಮ ಸಂಯೋಜಕ ದಯಾನಂದ ಆಳ್ವ, ಶರೀಪ್ ಜಟ್ಟಿಪಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ದಯಾನಂದ ಆಳ್ವ ದಂಪತಿಯನ್ನು ಗೌರವಿಸಲಾಯಿತು.


ದಯಾನಂದ ಆಳ್ವ ಸ್ವಾಗತಿಸಿ, ಕಸಾಪ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ ವಂದಿಸಿದರು. ಇನ್ನೋರ್ವ ಗೌರವ ಕಾರ್ಯದರ್ಶಿ ಚಂದ್ರಮತಿ ಕೆ. ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ್ಕಕೂ ಮೊದಲು ಬೆಳದಿಂಗಳ ಕವಿ ಕಾವ್ಯ ಗಾಯನ ಗೋಷ್ಠಿ ನಡೆಯಿತು. ಶ್ರೀಮತಿ ಲೀಲಾ ದಾಮೋದರ, ಶ್ರೀಮತಿ ಯಶೋದಾ ಎಂ.ಬಿ.ಆಲೆಟ್ಟಿ, ಪ್ರೊ.ಸಂಜೀವ ಕುದ್ಪಾಜೆ, ಶ್ರೀಮತಿ ವಿಮಲಾ ಅರುಣಾ ಪಡ್ಡಂಬೈಲು, ಶ್ರೀಮತಿ ಪ್ರೇಮಾ ಮುಲ್ಕಿ, ಶ್ರೀಮತಿ ಪೂರ್ಣಿಮಾ ಮಡಪ್ಪಾಡಿ, ಉದಯಭಾಸ್ಕರ್ ಸುಳ್ಯ, ಶ್ರೀಮತಿ ಕೊಡಪ್ಪಾಡಿ ಕವನ ವಾಚನ ಮಾಡಿದರು. ಗಾಯಕ ಕೆ.ಆರ್.ಗೋಪಾಲಕೃಷ್ಣ ಗಾಯನ ನೆರವೇರಿಸಿದರು.