ಕಾಯರ್ತೋಡಿ ರಕ್ತೇಶ್ವರಿ ಜೀರ್ಣೋದ್ಧಾರ & ಸೇವಾ ಸಮಿತಿಯಿಂದ ಡಾ.ವೀರೇಂದ್ರ ಹೆಗ್ಗಡೆ ಭೇಟಿ

0

ಕಾಯರ್ತೋಡಿ ಶ್ರೀ ರಕ್ತೇಶ್ವರಿ ಸನ್ನಿಧಾನದ ಸೇವಾ ಸಮಿತಿಯವರು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯನ್ನು ಭೇಟಿಯಾಗಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕ್ಷೇತ್ರದ ಕಾರ್ಯದ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ದಂಪತಿ, ಸೇವಾಸಮಿತಿ ಅಧ್ಯಕ್ಷ ಶಶಿದರ ಪಡ್ಪು, ಉಪಾಧ್ಯಕ್ಷ ಗಣೇಶ್ ಆಳ್ವ ದಂಪತಿ, ಎನ್.ಎ.ರಾಮಚಂದ್ರ, ಬೂಡು ರಾಧಾಕೃಷ್ಣ ರೈ, ಕೋಶಾಧಿಕಾರಿ ಕೃಷ್ಣ ಬೆಟ್ಟ, ಮಹಿಳಾ ಘಟಕದ ಅಧ್ಯಕ್ಷೆ ಜಯಕೃಷ್ಣ ಉಪಸ್ಥಿತರಿದ್ದರು.