ಐನೆಕಿದು:ಗೋವಿನ ರುಂಡ ಕಡಿದ ಪ್ರಕರಣ ಮಜ್ಜಾರು ಕ್ಷೇತ್ರದಲ್ಲಿ ತಪ್ಪೊಪ್ಪಿಕೊಂಡ ಚಂದ್ರಶೇಖರ

0

ಐನೆಕಿದುವಿನ ಕೊಪ್ಪಲ ಗದ್ದೆಯಲ್ಲಿ ಗೋವಿನ ರುಂಡ ಪತ್ತೆ ಪ್ರಕರಣದಲ್ಲಿ ಚಂದ್ರಶೇಖರ ಎಂಬವರು ಮಜ್ಜಾರು ಕ್ಷೇತ್ರದಲ್ಲಿ ತಪ್ಪೊಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.

ಶ್ರೀ ಉಳ್ಳಾಕುಲು ರಾಜನ್ ದೈವಸ್ಥಾನ ಮಜ್ಜಾರು ಕ್ಷೇತ್ರದಲ್ಲಿ ಎರಡು ವಾರದ ಹಿಂದೆ ಗಿರೀಶ್, ಶಿವರಾಮ, ಕೊರಗಪ್ಪ ದಡ್ಡು, ಗಿರಿಯಪ್ಪ ದಡ್ಡು ಪ್ರಕರಣದ ಬಗ್ಗೆ ಪ್ರಾರ್ಥಿಸಿದ್ದರು.
ಇಂದು ಚಂದ್ರಶೇಖರ್ ಕ್ಷೇತ್ರಕ್ಕೆ ಬಂದು ನಾವು ಐದು ಜನ ಗೋವನ್ನು ಕಟ್ಟಿ ಹಾಕಿದ್ದು ಹೌದಾಗಿದ್ದರೂ ಉಳಿದವರಿಗೆ ತಿಳಿಸದೆ ರಾತ್ರಿ ತಾನು ನೆಲ್ಯಾಡಿ ಭಾಗದ ವ್ಯಕ್ತಿಯನ್ನು ಕರೆಯಿಸಿ ಹತ್ಯೆಗೆ ವ್ಯವಸ್ಥೆ ಮಾಡಿದ್ದಾಗಿ ತಪ್ಪೊಪ್ಪಿ ಕೊಂಡಿರುವುದಾಗಿ ತಿಳಿದು ಬಂದಿದೆ. ಈ ಸಂದರ್ಭ ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯ ಗಿರೀಶ್ ಆಚಾರ್ಯ ಉಪಸ್ಥಿತರಿದ್ದರು.