ಸಂಪಾಜೆಯಲ್ಲಿ ಜನಜಾಗೃತಿಗಾಗಿ ಬೀದಿನಾಟಕ

0

ಕೊಡಗು ಜಿಲ್ಲಾ ಪಂಚಾಯತ್ ,ಸಂಪಾಜೆ ಗ್ರಾಮ ಪಂಚಾಯತ್ ವತಿಯಿಂದ ಸರಕಾರಿ ಯೋಜನೆಗಳ ಮತ್ತು ಸಾಮಾಜಿಕ ಜವಾಬ್ದಾರಿ ಬಗ್ಗೆ ನುರಿತ ಕಲಾವಿದರಿಂದ ಇಂದು ಸಂಪಾಜೆ ಗೇಟಿನ ಬಳಿ ಬೀದಿನಾಟಕ ಮಾಡಲಾಯಿತು.


ಸಂಪಾಜೆ ಗ್ರಾ.ಪಂ ಅದ್ಯಕ್ಷೆ ಶ್ರಿಮತಿ.ನಿರ್ಮಲ ಭರತ್ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪಯಸ್ವಿನಿ ಸೊಸೈಟಿ ಅದ್ಯಕ್ಷ ಅನಂತ್ ಊರುಬೈಲು ,ಉಪಾಧ್ಯಕ್ಷ ರಾಜಾರಾಮ ಕಳಗಿ ,ಗ್ರಾ.ಪಂ ಮಾಜಿ ಅದ್ಯಕ್ಷ ಕುಮಾರ್ ಚಿದ್ಕಾರ್ ,ಸದಸ್ಯೆ ರಮಾದೇವಿ ಕಳಗಿ ,ಆಶಾ ಕಾರ್ಯಕರ್ತರು ,ಸ್ತ್ರೀ ಶಕ್ತಿ ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು
.