ಅರಂಬೂರಿನಲ್ಲಿ ಋತಾಯು ಸ್ವಾಸ್ಥ್ಯ ಕೇಂದ್ರ ಶುಭಾರಂಭ

0

ಅರಂಬೂರು ಭಾರದ್ವಾಜ ಆಶ್ರಮದ ಬಳಿಋತಾಯು ಆಯುರ್ವೇದ ಸ್ವಾಸ್ಥ್ಯ ಕೇಂದ್ರವನ್ನು ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ರವರು ದೀಪ ಬೆಳಗಿಸಿ ನ.7 ರಂದು ಉದ್ಘಾಟಿಸಿದರು.

ಸ್ವಾಸ್ಥ್ಯ ಕೇಂದ್ರದ ವೈದ್ಯರಾದ ಡಾ.ದೀನಪ್ರಕಾಶ್ ಭಾ ರದ್ವಾಜ್ ಮತ್ತು ಡಾ. ರೋಹಿಣಿ ಭಾರದ್ವಾಜ್ ಅತಿಥಿಗಳನ್ನು ಸ್ವಾಗತಿಸಿದರು. ಡಾ.ಯಶಸ್ವಿನಿ ಭಾರದ್ವಾಜ್, ಡಾ. ಓಂಕಾರ ನಾರಾಯಣ್ ಧನ್ವಂತರಿ ಪೂಜೆಯನ್ನು ನೆರವೇರಿಸಿದರು.ಧಾರ್ಮಿಕ ಕಾರ್ಯಕ್ರಮವು ವೆಂಕಟೇಶ ಶಾಸ್ತ್ರೀ ಮತ್ತು ಅಜಿತ್ ಭಟ್ ರವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವಿಶೇಷವಾಗಿ ಗೋಪೂಜೆ ನೆರವೇರಿಸಿದರು. ಆಲೆಟ್ಟಿ ಸೊಸೈಟಿ ಅಧ್ಯಕ್ಷ ಶ್ರೀಪತಿ ಭಟ್ , ಡಾ. ರವಿಶಂಕರ್ ಭಾರದ್ವಾಜ್, ಜಯರಾಮ ಭಾರದ್ವಾಜ್, ಶಾಂತಾರಾಮ ಭಟ್,ಆರ್ ಕೆ ಭಟ್, ಮೊದಲಾದವರು ಶುಭ ಹಾರೈಸಿದರು.
ಆಯುರ್ವೇದ ಪಂಚಕರ್ಮ ಚಿಕಿತ್ಸೆ ಹಾಗೂ ಇನ್ನಿತರ ಚಿಕಿತ್ಸಾ ಸೌಲಭ್ಯಗಳು ಲಭ್ಯ ವಿರುವುದಾಗಿ ತಿಳಿಸಿದರು.