ನ.ಪಂ. ನೀರು ಸರಬರಾಜಿನಲ್ಲಿ ವ್ಯತ್ಯಯ, ತುರ್ತು ನೀರು ಬೇಕಾದಲ್ಲಿ ನ.ಪಂ. ಗೆ ಮಾಹಿತಿ ನೀಡಲು ಸೂಚನೆ

0

ಕಲ್ಲುಮುಟ್ಲು ನೀರೆತ್ತುವ 3 ಪಂಪ್ ಗಳಲ್ಲಿ ಎರಡು ಪಂಪ್ ಗಳು ಪದೇ ಪದೇ ಕೈಕೊಡುತ್ತಿದ್ದು ಕಳೆದ ಮೂರು ದಿನಗಳಿಂದ ಅವುಗಳನ್ನು ಸರಿಪಡಿಸಲು ಸತತ ವಾಗಿ ಸಿಬ್ಬಂದಿ ಗಳು ಹಾಗೂ ತಂತ್ರಜ್ಞರು ಶ್ರಮಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ನಗರದ ಕೆಲವು ಕಡೆಗಳಲ್ಲಿ ನೀರು ಸರಬರಾಜಿನಲ್ಲಿ ತೊಂದರೆಯಾಗಿದ್ದು, ಪಂಚಾಯತ್ ಟ್ಯಾಂಕ್ ಮುಖಾಂತರ ನೀರು ನೀಡಲಾಗುತ್ತಿದೆ. ಇವತ್ತು ಕೂಡಾ ಪಂಪ್ ಸರಿಯಾಗದಿರುವ ಹಿನ್ನೆಲೆಯಲ್ಲಿ ತುರ್ತು ನೀರಿನ ಅವಶ್ಯಕತೆ ಇರುವವರು ಪಂಚಾಯತ್ ಗೆ ಮಾಹಿತಿ ನೀಡಿದಲ್ಲಿ ನೀರು ಪೂರೈಕೆ ಮಾಡಲಾಗುವುದು ಎಂದು ನ.ಪಂ.‌ಅಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಗಳು ತಿಳಿಸಿದ್ದಾರೆ.