ತೊಡಿಕಾನ ಸಮೀಪ ಅರಣ್ಯ ಇಲಾಖೆ ಸಿಬ್ಬಂದಿ ಹೊಳೆಗೆ ಬಿದ್ದು ಮೃತ್ಯು

0

ತೊಡಿಕಾನ ಸಮೀಪದ ಕೊಡಗು ಜಿಲ್ಲೆಗೆ ಸೇರಿದ ಪಾರೆಸ್ಟ್ ವಾಚರ್ ಆಕಸ್ಮಿಕವಾಗಿ ಹೊಳೆಗೆ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ತೊಡಿಕಾನ ಗಡಿಭಾಗದ
ಮಾವಿನಕಟ್ಟೆ ನರುವೋಳು ಮೊಟ್ಟೆ ಬಳಿ ನಡೆದಿದೆ.

ಮೃತಪಟ್ಟ ಫಾರೆಸ್ಟ್ ವಾಚರ್ ಚಿನ್ನಪ್ಪ (58 ವರ್ಷ ) ಎಂದು ಗುರುತಿಸಲಾಗಿದೆ.

ಕೊಡಗು ಅರಣ್ಯ ಇಲಾಖೆಯಿಂದ ಭೂಮಿಯ ಸರ್ವೆಗೆ ಹೋದ ಸಂದರ್ಭ ತೊಡಿಕಾನ ಸಮೀಪದ ಮಾವಿನಕಟ್ಟೆ ನರುವೋಳು ಮೊಟ್ಟೆ ಎಂಬಲ್ಲಿ ಹೊಳೆ ಬದಿಯಲ್ಲಿ ನೀರು ಕುಡಿಯಲು ಪ್ರಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮ್ರತ ದೇಹ ಹೊಳೆಯಲ್ಲಿದ್ದು ಪೊಲೀಸರು ಮತ್ತು ಮನೆಯವರು ಬಂದ ಬಳಿಕ ತೆಗೆಯಲಾಗುವುದೆಂದು ತಿಳಿದು ಬಂದಿದೆ.

ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯ ಬಳಿಕ ತಿಳಿದು ಬರಬೇಕಾಗಿದೆ.