ಜೇಸಿಐ ವಲಯಾಧ್ಯಕ್ಷರಾಗಿ ಪುರುಷೋತ್ತಮ ಶೆಟ್ಟಿ

0

ಜೇಸಿಐ ವಲಯ 15ರ 2023ನೇ ಸಾಲಿನ ವಲಯಾಧ್ಯಕ್ಷರಾಗಿ ಸುಳ್ಯ ಪಂಬೆತ್ತಾಡಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪುತ್ತೂರು ಜೇಸಿಐ ಪೂರ್ವಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಗೆಣಸಿನಕುಮೇರುರವರು ಆಯ್ಕೆಯಾಗಿದ್ದಾರೆ.


ನ.5 ಮತ್ತು 6ರಂದು ಕಾರ್ಕಳದಲ್ಲಿ ನಡೆದ ವಲಯ ಸಮ್ಮೇಳನದಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಸಲಾಯಿತು. ಪುರುಷೋತ್ತಮ ರೈಯವರು 2016 ರಲ್ಲಿ ಪುತ್ತೂರು ಘಟಕದ ಅಧ್ಯಕ್ಷರಾಗಿ, 2017 ರಲ್ಲಿ ವಲಯ 15ರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಪುತ್ತೂರು ಘಟಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಘಟಕವು ವಲಯ ಪ್ರಶಸ್ತಿ, ರಾಷ್ಟ್ರಪ್ರಶಸ್ತಿಯ ಮನ್ನಣೆಗೆ ಪಾತ್ರವಾಗಿತ್ತು. ಇವರು ಪುತ್ತೂರು ತಾಲೂಕಿನ
ಆರ್ಯಾಪು ಗ್ರಾಮದ ಗೆಣಸಿನಕುಮೇರು ನಿವಾಸಿಯಾಗಿರುತ್ತಾರೆ.