ಮಂಡೆಕೋಲು : ರೋಟರಿ ಕ್ಲಬ್ ವತಿಯಿಂದ ನೂತನ ಮನೆಗೆ ಶಿಲಾನ್ಯಾಸ

0

ಮಂಡೆಕೋಲು ಗ್ರಾಮದ ಮಾರ್ಗ ಎಂಬಲ್ಲಿ ವಿಶೇಷ ಚೇತನ ಬೇಡುರವರಿಗೆ ರೋಟರಿ ಕ್ಲಬ್ ಸುಳ್ಯದ ವತಿಯಿಂದ ನಿರ್ಮಿಸಲಾಗುವ ಮನೆಯ ಶಿಲಾನ್ಯಾಸ ಮತ್ತು ಭೂಮಿ ಪೂಜೆ ಕಾರ್ಯಕ್ರಮವು ನ. ೫ ರಂದು ನಡೆಯಿತು. ಶಿಲ್ಪಿ ಅಶೋಕ್ ಹಾಗೂ ಗುತ್ತಿಗೆದಾರ ಪ್ರಕಾಶ್ ಕಣೇಮರಡ್ಕರ ನೇತೃತ್ವದಲ್ಲಿ ಪೂಜಾ ವಿಧಾನಗಳನ್ನು ನಡೆಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷರಾದ ರೊ. ಚಂದ್ರಶೇಖರ ಪೇರಾಲುರವರು ಪ್ರಾಸ್ತಾವಿಕ ಮಾತಾಡಿ ಸ್ವಾಗತಿಸಿ ಶಾಲು ನೀಡಿ ಗೌರವಿಸಿದರು. ಗ್ರಾಮ ಪಂಚಾಯತ ನ ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು ಮಾತನಾಡಿ, ಬೇಡುರವರ ಒಂದು ಮನೆ ಮಾತ್ರ ಈ ವಸತಿ ಪ್ರದೇಶದಲ್ಲಿ ಶೋಚನೀಯ ಸ್ಥಿತಿಯಲ್ಲಿದೆ. ಅವರಿಗೆ ಮನೆ ಕೊಡಿಸಲು ಕಾನೂನಾತ್ಮಕವಾಗಿ ಅಡಚಣೆ ಇರುವ ಕಾರಣ ಇದಕ್ಕೆ ತಕ್ಷಣವೇ ಸ್ಪಂದಿಸಿ ಮನೆ ನಿರ್ಮಾಣಕ್ಕೆ ಮುಂದಾದ ಸುಳ್ಯ ರೋಟರಿ ಕ್ಲಬ್ ಗೆ ಅಭಿನಂದನೆ ಸಲ್ಲಿಸಿದರು.


ಮಂಡೆಕೋಲು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿ ಮನೆ ಕಾರ್ಯಕ್ರಮಕ್ಕೆ ಶುಭ ಹಾರೈಸುವುದರೊಂದಿಗೆ ಈ ಕಾರ್ಯಕ್ಕೆ
ನೆರವು ನೀಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಕ್ಲಬ್ ನ ಸಮುದಾಯ ಸೇವೆಯ ನಿರ್ದೇಶಕರಾದ ರೊ. ಸನತ್ ಪಿ ಮನೆ ನಿರ್ಮಾಣ ಸಮಿತಿಯ ಅಧ್ಯಕ್ಷ ರೊ. ಪ್ರಭಾಕರನ್ ನಾಯರ್, ರೊ. ಮಧುಸೂದನ್ . ಕೆ. ರೋ. ಕಸ್ತೂರಿ ಶಂಕರ್, ರೋ. ಜಗದೀಶ ಎ ಎಸ್, ರೊ. ಹರಿರಾಯ ಕಾಮತ್ ರೊ. ಆನಂದ ಖಂಡಿಗ ಭಾಗಿಯಾಗಿದ್ದರು.

ಮಂಡೆಕೋಲು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಅನಿಲ್ ತೋಟಪಾಡಿ, ಪಿ ಡಿ ಓ ಶ್ರೀ ರಮೇಶ್, ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಉಷಾ ಗಂಗಾಧರ್, ಮಿಲನ್ ಪಾತಿಕಲ್ಲು ಮನೆಯ ಫಲಾನುಭವಿ ಶ್ರೀ ಬೇಡು ಮತ್ತು ಆತನ ಸಂಬಂಧಿಕರು ಉಪಸ್ಥಿತರಿದ್ದರು .ಕಾರ್ಯದರ್ಶಿ, ರೊ. ಮಧುರ ಎಂ ಆರ್ ವಂದಿಸಿದರು.