ನ.14 ರಂದು ಮಕ್ಕಳ ದಿನಾಚರಣೆ ಪ್ರಯುಕ್ತ ಸಂಪಾಜೆಯಲ್ಲಿ ಸಾಂಸ್ಕೃತಿಕ ಹಬ್ಬ

0

ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳ ಸಾಂಸ್ಕೃತಿಕ ಹಬ್ಬ 2022 ಗ್ರಾಮ ಪಂಚಾಯತ್ ಸಂಪಾಜೆ ದ. ಕ. ಹಾಗೂ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ 7 ಪ್ರಾಥಮಿಕ ಶಾಲೆ ಹಾಗೂ 4 ಪ್ರೌಢಶಾಲೆ ಮಟ್ಟದ ಮಕ್ಕಳ ಸಾಂಸ್ಕೃತಿಕ ಹಬ್ಬ 2022 ಸ್ಥಳ -ತೆಕ್ಕಿಲ್ ಶಾಲಾ ಮೈದಾನ ನ.14ರಂದು ನಡೆಯಲಿದೆ ಎಂದು ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಜಿ ಕೆ ಹಮೀದ್ ಗೂನಡ್ಕ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲಾ ಶಾಲೆಗಳಿಗೆ ಮಾರ್ಗ ಸೂಚಿ ಕಳುಹಿಸಲಾಗಿದೆ 2.ಸ್ಪರ್ಧಾ ವಿಜೇತರಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಭಾಗವಹಿಸಿದ ಶಾಲೆಗಳಿಗೆ ಸಮಾಧಾನಕರ ಬಹುಮಾನ ನೀಡಲಾಗುವುದು 3.ಮದ್ಯಾಹ್ನ ಭೋಜನದ ವೆವಸ್ಥೆ ಇದೆ ಎಂದು ಅವರು ತಿಳಿಸಿದ್ದಾರೆ.