ಸುಳ್ಯದಲ್ಲಿ ನಡೆಯಲಿರುವ ಮ್ಯಾಟ್ ಕಬಡ್ಡಿ ಪಂದ್ಯಾಟದ ಪೂರ್ವ ಸಿದ್ಧತಾ ಸ್ಥಳಕ್ಕೆ ಸಚಿವ ಅಂಗಾರ ಭೇಟಿ

0

ಸುಳ್ಯದಲ್ಲಿ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವಾರ್ಷಿಕೋತ್ಸವ ಮತ್ತು ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟದ ಪೂರ್ವ ಸಿದ್ಧತೆ ನಡೆಯುತ್ತಿರುವ ಸ್ಥಳಕ್ಕೆ ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ರವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಕೆ.ಎಫ್.ಡಿ.ಸಿ. ನಿಗಮದ ಅಧ್ಯಕ್ಷಎ‌.ವಿ.ತೀರ್ಥರಾಮ, ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಚಂದ್ರ ಕೋಲ್ಚಾರು, ಜಯಪ್ರಕಾಶ್ ಕುಂಚಡ್ಕ, ಮಹೇಶ್ ಕುಮಾರ್ ರೈ ಮೇನಾಲ, ಸುನಿಲ್ ಕುಮಾರ್ ಕೇರ್ಪಳ ಮತ್ತು ಸಂಘದ ಗೌರವಾಧ್ಯಕ್ಷ ಲೋಕನಾಥ್ ಎಸ್.ಪಿ, ಅಧ್ಯಕ್ಷ ಗಿರಿಧರ ಸ್ಕಂದ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.