ಜಯನಗರ : ಮುಸ್ತಫ ಅಂಜಿಕಾರ್ ರವರ ವಿದೇಶಯಾತ್ರೆಗೆ ಬೀಳ್ಕೊಡುಗೆ

0

ಸುಳ್ಯ ಜಯನಗರ ನಿವಾಸಿ ಸಮಾಜಸೇವಕ ಮುಸ್ತಫ ಅಂಜಿಕಾರ್ ಉದ್ಯೋಗದ ನಿಮಿತ್ತ ದೋಹ ಕತ್ತರಿಗೆ ವಿದೇಶ ಯಾತ್ರೆ ಕೈಗೊಂಡಿದ್ದರು.

ಇವರು ವಿದೇಶಕ್ಕೆ ತೆರಳುವ ದಿನ ಜಯನಗರ ಅವರ ನಿವಾಸದಲ್ಲಿ ಸುಳ್ಯ ಗಾಂಧಿನಗರ ಮಸೀದಿ ಸಮಿತಿ ಅಧ್ಯಕ್ಷ ಹಾಜಿ ಮುಸ್ತಫಾ ಜನತಾರವರ ನೇತೃತ್ವದಲ್ಲಿ ಮುಖಂಡರುಗಳು ಭಾಗವಹಿಸಿ ಮುಸ್ತಫಾರವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಮೊಗರ್ಪಣೆ ಮತ್ತು ಜಯನಗರ ಮದರಸದ ಸದರ್ ಮೊಅಲ್ಲಿಮ್ ಮಹಮ್ಮದ್ ಸಕಾಫಿ, ಅಬ್ದುಲ್ ಕರೀಂ ಸಕಾಫಿ, ಹಾಜಿ ಗಫೂರ್ ಗಾಂಧಿನಗರ, ಮುನೀರ್ ಹಳೆಗೇಟು, ಅಬ್ದುಲ್ಲಾ ಹಾಜಿ ಜಯನಗರ, ಮೊದಲಾದವರು ಉಪಸ್ಥಿತರಿದ್ದರು.