ಸುಳ್ಯ ನ.ಪಂ.ಗೆ ಇಬ್ಬರು ನಾಮನಿರ್ದೇಶಿತ ಸದಸ್ಯರನ್ನು ಬಿಜೆಪಿಯವರು ಗೂಂಡಾಗಿರಿಗಾಗಿ ನೇಮಿಸಿದಂತಿದೆ : ಎಂ. ವೆಂಕಪ್ಪ ಗೌಡ

0

ಇಬ್ಬರು ನಾಮ ನಿರ್ದೇಶಿತ ಸದಸ್ಯರಿಂದ ಕಳೆದ ನಗರ ಪಂಚಾಯತ್ ಸಭೆಯಲ್ಲಿ ಗೊಂದಲ ಏರ್ಪಟ್ಟಿದೆ. ಕಳೆದ ನಗರ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಸೋತವರನ್ನು ನಾಮ ನಿರ್ದೇಶಿತ ಸದಸ್ಯತ್ವ ನೀಡಿ ನಗರ ಪಂಚಾಯಿತಿಗೆ ಕರೆ ತಂದದ್ದು ಗೂಂಡಾಗಿರಿ ಮಾಡಲೆಂದೇ ಎಂದು ನಗರ ಪಂಚಾಯತ್ ವಿಪಕ್ಷ ಸದಸ್ಯ ಎಂ. ವೆಂಕಪ್ಪ ಗೌಡ ಹೇಳಿದರು.
ಅವರು ಇಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.


ಸುಳ್ಯ ನಗರ ಪಂಚಾಯತ್‌ನಲ್ಲಿ ಸಭೆಗಳು ಅಚ್ಚುಕಟ್ಟಾಗಿ ನಡೆಯುತ್ತಿತ್ತು, ಆದರೆ ಯಾವಾಗ ಎರಡು ಮಂದಿ ನಾಮ ನಿರ್ದೇಶಿತ ಸದಸ್ಯ ಆಯ್ಕೆಯಾದರೋ ಅಂದಿನಿಂದ ನಗರ ಪಂಚಾಯತ್ ಸಭೆಯಲ್ಲಿ ಗದ್ದಲ ಆರಂಭ ಆಗಿದೆ.
ಈ ಮಾತನ್ನು ಸ್ವತಃ ನಗರ ಪಂಚಾಯತ್ ಅಧ್ಯಕ್ಷರು ಕೂಡ ಒಪ್ಪಿಕೊಂಡಿದ್ದು, ಚುನಾಯಿತ ಪ್ರತಿನಿಧಿಗಳಾದ ನಮ್ಮನ್ನು ನಾಮ ನಿರ್ದೇಶಿತ ಸದಸ್ಯರು ಸಭೆಯಿಂದ ಹೊರ ನಡೆಯಿರಿ ಎಂದು ಹೇಳುತ್ತಾರಾದರೆ ಬಿಜೆಪಿ ಯವರು ಇಬ್ಬರು ಗೂಂಡಾಗಳನ್ನು ಹಲ್ಲೆ ನಡೆಸಲೆಂದೇ ಆಯ್ಕೆ ಮಾಡಿದಂತಿದೆ.
ನಗರ ಪಂಚಾಯತ್ ನಲ್ಲಿ ಚನಾವಣೆಯಲ್ಲಿ ಆಯ್ಕೆಯಾದ ನಾವು ೪ ಮಂದಿ ಮತ್ತು ಪಕ್ಷೇತರರು ಇಬ್ಬರು ಸೇರಿ ಆರು ಮಂದಿ ಇದ್ದೇವೆ. ಆದರೆ ನಮಗೆ ಆಡಳಿತ ಮಾಡಲು ಸಾದ್ಯವಿಲ್ಲ. ಆಡಳಿತದಲ್ಲಿರುವ ಲೋಪಗಳನ್ನು ಪ್ರಶ್ನೆ ಮಾಡುವ ಹಕ್ಕು ನಮಗಿದೆ.
ನಾವು ಪ್ರಶ್ನೆ ಮಾಡುವ ಸಂದರ್ಭದಲ್ಲಿ ಉತ್ತರ ನೀಡಬೇಕಾದವರು ನೀಡದೇ ಇದ್ದಾಗ,ಮತ್ತು ನಗರ ಪಂಚಾಯತ್ ಕಚೇರಿಯಲ್ಲಿ ಇಂಜಿನಿಯರ್, ಆರೋಗ್ಯಾದಿಕಾರಿ, ಸೇರಿದಂತೆ ವಿವಿಧ ಅಧಿಕಾರಿಗಳ ನೇಮಕ ಮಾಡದೇ ಇದ್ದಾಗ ಇದನ್ನು ಪ್ರಶ್ನಿಸಿ ನಾವು ಪ್ರತಿಭಟಿಸಿದ್ದೇವೆ. ಆಡಳಿತ ಪಕ್ಷದವರ ವಿರುದ್ಧ ನ್ಯಾಯಕ್ಕಾಗಿ ಧರಣಿ ಕುಳಿತ ಸಂದರ್ಭದಲ್ಲಿ ಅದ್ಯಕ್ಷರ ಎದುರೇ ನಾಮ ನಿರ್ದೇಶಿತ ಸದಸ್ಯರು ನಮ್ಮನು ಹೊರ ಹೋಗುವಂತೆ,ನಮ್ಮ ಮೇಲೆ ಸವಾರಿ ಮಾಡುವಂತದನ್ನು ವಿರೋದ ಮಾಡದೆ ಇರಲಾದೀತೆ ಎಂದು ಅವರು ಪ್ರಶ್ನಿಸಿದ್ದರು. ಸುಳ್ಯದ ಜನತೆಯ ಮೂಲಭೂತ ಸಮಸ್ಯೆಗಳಲ್ಲಿ ನಿರಾಶ್ರೀತರಿಗೆ ಆಶ್ರಯ ಯೋಜನೆ, ಕುಡಿಯುವ ನೀರು,ಕಸ ವಿಲೇವಾರಿ, ಬೀದಿದೀಪ, ರಸ್ತೆ ಸೇರಿದಂತೆ ಯಾವುದೇ ಯೋಜನೆ ಸಮರ್ಪಕವಾಗಿ ನಡೆಯುತ್ತಿಲ್ಲ, ಈ ಹಿಂದಿನ ಸಮಯದಲ್ಲಿ ವಾರ್ಡಗಳಿಗೆ ೧೦ ರಿಂದ ೧೫ ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆಯಾಗುತ್ತಿತ್ತು.
ಆದರೆ ಈಗಿನ ಆಡಳಿತದಲ್ಲಿ ಒಂದೇ ಒಂದು ಅಭಿವೃದ್ದಿ ಕಾರ್ಯ ಆಗುತ್ತಿಲ್ಲ ಎಂದರು ಒಳಚರಂಡಿ ಕಾಮಗಾರಿಯಲ್ಲಿ ೨ ಕೋಟಿ ೮೭ ಲಕ್ಷ ಅನುದಾನ ಪೋಲಾಗಿದೆ.
ಮುಂದಿನ ದಿನಗಳಲ್ಲಿ ಇದರ ಬಗ್ಗೆ ದೂರು ದಾಖಲೆಗಳ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ನಗರ ಪಂಚಾಯತ್ ಆಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದ ವಿಪಕ್ಷ ನಾಯಕ ಬಾಲಕೃಷ್ಣ ಬಟ್ ಕೊಡೆಂಕೇರಿ ಮಾತನಾಡಿ ನಾಮ ನಿರ್ದೇಶಕ ಸದಸ್ಯರುಗಳ ಕರ್ತವ್ಯ ಏನು ಎಂಬುದನ್ನು ಅರಿಯದೆ ಇರುವವರನ್ನು ಆಯ್ಕೆ ಮಾಡಿರುವುದು ಸರಿಯಲ್ಲ ಎಂದು ಹೇಳಿದರು. ಬಿಜೆಪಿಯವರು ಮಾತೆತ್ತಿದರೆ ನಾವು ದಲಿತ ಸಮುದಾಯದ ಜನತೆಗೆ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳುವವರು ಅವರಾಗಿ ಏನು ಮಾಡುವುದಿಲ್ಲ, ನಾವು ಯಾವುದಾದರೂ ಒಂದು ಯೋಜನೆಯನ್ನು ಮಾಡಲು ಹೊರಟರೆ ಅದನ್ನು ತಡೆಯುವ ಕೆಲಸಕ್ಕೆ ಮುಂದಾಗುತ್ತಾರೆ. ನನ್ನ ವಾರ್ಡಿನಲ್ಲಿ ದಲಿತ ಸಮುದಾಯದ ಕಾಲೋನಿಗೆ ಕುಡಿಯುವ ನೀರಿನ ಯೋಜನೆಗಾಗಿ ಬೋರ್ ವೆಲ್ ಕೊರೆಸಲು ಮುಂದಾದಾಗ ನಾಮನಿರ್ದೇಶಕ ಸದಸ್ಯರಾದ ರೋಹಿತ್ ರವರು ಅದನ್ನು ತಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಇದು ಎಷ್ಟು ಸರಿ ಎಂದು ಅವರು ಕೇಳಿದರು. ಶಾಂತಿನಗರ ಕ್ರೀಡಾಂಗಣ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸುತ್ತಿದ್ದು ಅದರ ನಿರ್ಮಾಣದ ಲೆಕ್ಕಾಚಾರದ ಫಲಕಗಳನ್ನು ಅಳವಡಿಸಿದೆ, ಸಾರ್ವಜನಿಕರಿಗೆ ಅದರ ಮಾಹಿತಿಗಳನ್ನು ನೀಡದೆ ಜನರ ದುಡ್ಡನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇನ್ನೊಬ್ಬ ಸದಸ್ಯ ಶರೀಪ್ ಕಂಠಿ ಮಾತನಾಡಿ ಸುಳ್ಯ ನಗರದ ಮುಖ್ಯ ರಸ್ತೆಯಲ್ಲಿ ನಮ್ಮ ಶಾಸಕರು ನೂರು ಬಾರಿ ಹೋಗುತ್ತಾರೆ. ಆದರೆ ನಮ್ಮ ನಗರ ಪಂಚಾಯತಿಗೆ ಬಂದು ನಮ್ಮ ನಗರದ ಅಭಿವೃದ್ಧಿಗಾಗಿ ಮಾತನಾಡಲು ಅವರಲ್ಲಿ ಸಮಯ ಇರುವುದಿಲ್ಲ. ಯೋಜನೆಗಳನ್ನು ತರುವ ಬಗ್ಗೆ ಅವರಿಗೆ ಕಾಳಜಿ ಇಲ್ಲ.
ಕೇಳುವಾಗ ಇಡೀ ರಾಜ್ಯವನ್ನು ಸುತ್ತಬೇಕು ಎನ್ನುವ ಇವರಿಗೆ ಮರಳಿ ಒಂದು ದಿನ ನಮ್ಮದೇ ಊರಿಗೆ ಬರಬೇಕೆಂಬ ಚಿಂತೆ ಇವರಲ್ಲಿ ಬೇಕು. ಆ ಸಂದರ್ಭದಲ್ಲಿ ನನ್ನ ಊರಿಗೆ ನಾನು ಏನು ಯೋಜನೆಯನ್ನು ತಂದಿದ್ದೇನೆ ಎಂಬ ಪ್ರಶ್ನೆ ಅವರಲ್ಲಿ ಮೂಡುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಪಂಚಾಯತ್ ಸದಸ್ಯ ಧೀರಾ ಕ್ರಾಸ್ತಾ ಉಪಸ್ಥಿತರಿದ್ದರು.