ಗ್ರಾಮ ಪಂಚಾಯತ್ ಐವರ್ನಾಡು : ಮಡ್ತಿಲ ಕುಟುಂಬಸ್ಥರ ವತಿಯಿಂದ ಬೃಹತ್ ಸ್ವಚ್ಛತೆ

0

ಐವರ್ನಾಡು ಗ್ರಾಮ ಪಂಚಾಯತ್ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ ಮಾಸಿಕ ಸ್ವಚ್ಛತಾ ಕಾರ್ಯಕ್ರಮವು ನ.06 ರಂದು ಮಡ್ತಿಲ ಕುಟುಂಬಸ್ಥರ ವತಿಯಿಂದ ನಡೆಯಿತು.
ಬೆಳಿಗ್ಗೆ 7-00 ಗಂಟೆಯಿಂದ 9-00 ರ ತನಕ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.


ಐವರ್ನಾಡು ಮುಖ್ಯ ರಸ್ತೆ ಬದಿಯಿಂದ ದರ್ಖಾಸ್ತು ರಬ್ಬರ್ ಫ್ಯಾಕ್ಟರಿವರೆಗೆ ಮತ್ತು ಬೇಂಗಮಲೆ ವರೆಗೆ ಸ್ವಚ್ಛತೆ ಮಾಡಲಾಯಿತು.
ಈ ಸಂದರ್ಭದಲ್ಲಿ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ಯಾಮ್ ಪ್ರಸಾದ್, ಉಪಾಧ್ಯಕ್ಷೆ ಶ್ರೀಮತಿ ಸುಜಾತ ಪವಿತ್ರಮಜಲು, ಗ್ರಾಮ ಪಂಚಾಯತ್ ಸದಸ್ಯರು, ದಿನೇಶ್ ಮಡ್ತಿಲ, ಮಡ್ತಿಲ ಕುಟುಂಬಸ್ಥರು, ಎಲ್ಲಾ ಸಂಘಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು, ಅಂಗನವಾಡಿ/ ಆಶಾ ಕಾರ್ಯಕರ್ತೆಯರು, ಊರಿನ ಪ್ರಮುಖರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.