ನ.26 : ಸುಳ್ಯದಲ್ಲಿ ಸಚಿವ ಎಸ್.ಅಂಗಾರರ ನೇತೃತ್ವದಲ್ಲಿ ಬೃಹತ್ ಉದ್ಯೋಗ ಮೇಳ, 40 ಕ್ಕೂ ಹೆಚ್ಚು ವಿವಿಧ ಕಂಪೆನಿಗಳ ಭಾಗವಹಿಸುವಿಕೆ

0

ಬಂದರು ಮೀನುಗಾರಿಕೆ
ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರರ ನೇತೃತ್ವದಲ್ಲಿ ಬೃಹತ್ ಉದ್ಯೋಗ ಮೇಳ ನ.26 ರಂದು ಸುಳ್ಯದ ನೆಹರೂ ಸ್ಮಾರಕ ಮಹಾ ವಿದ್ಯಾಲಯದಲ್ಲಿ ನಡೆಯಲಿದೆ.
ಸಚಿವರ ಸಹಕಾರದಲ್ಲಿ ಮಂಗಳೂರಿನ ಕೆರಿಯರ್ ಡೆಸ್ಟಿನಿ ಸಂಸ್ಥೆ ಎರಡನೇ ಬಾರಿಗೆ ಸುಳ್ಯದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿದೆ. ಬೆಳಿಗ್ಗೆ 9 ರಿಂದ
ಸಂಜೆ 6ರವರೆಗೆ ನಡೆಯುವ ಉದ್ಯೋಗ ಮೇಳದಲ್ಲಿ 40 ಕ್ಕೂ ಹೆಚ್ಚು ವಿವಿಧ ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಇದೆ.


ಯಾವುದೇ ಕಂಪನಿಗಳು ಉದ್ಯೋಗ ಮೇಳವನ್ನು ನೋಂದಾಯಿಸಲು ಬಯಸಿದರೆ ವಸತಿ/ಸಾರಿಗೆ ಮತ್ತು ಆಹಾರ ನೀಡಲಾಗುವುದು. ಉದ್ಯೋಗ ಬಯಸಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಆದವರು, ಪದವಿ, ಸ್ನಾತಕೋತ್ತರ, ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ಪದವೀಧರರು ಭಾಗವಹಿಸಬಹುದು‌. ಉಚಿತವಾಗಿ ನೋಂದಾವಣೆ ಮಾಡಿಸಿಕೊಳ್ಳಬಹುದು. ಉದ್ಯೋಗ ಮೇಳಕ್ಕೆ ಆಗಮಿಸುವವರು 10 ಪ್ರತಿ ಬಯೋಡಾಟ ತರಬೇಕು ಹೆಚ್ಚಿನ ಮಾಹಿತಿಗಾಗಿ ಕೆರಿಯರ್ ಡೆಸ್ಟಿನಿ ಮಂಗಳೂರು ಸಂಪರ್ಕಿಸಬಹುದು ಎಂದು
(ನಂ.7338676611) ಕೆರಿಯರ್ ಡೆಸ್ಟಿನಿ ಪ್ರಕಟಣೆ ತಿಳಿಸಿದೆ.