ಪೆರುವಾಜೆ : ಜಲಜೀವನ್ ಯೋಜನೆ ಕಾಮಗಾರಿ ಆರಂಭ ಆಗದೇ ಇದ್ದಲ್ಲಿ ಪ್ರತಿಭಟನೆ

0

ನವೆಂಬರ್ 21 ರಂದು ಪ್ರತಿಭಟನೆಗೆ ಸಿದ್ಧತೆ

ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರ್ಕೆತ್ತಿ ವಾರ್ಡ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು , ಪೆರುವಾಜೆ ಗ್ರಾಮ ಪಂಚಾಯತ್ ಗೆ ಜಲಜೀವನ್ ಯೋಜನೆ ಮಂಜೂರಾತಿ ಆಗಿ ಹಲವು ತಿಂಗಳು ಕಳೆದಿದೆ.ಇಲ್ಲಿಯವರೆಗೂ ಕಾಮಗಾರಿ ಆರಂಭ ಗೊಂಡಿಲ್ಲ.ಇದರಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ಹಿನ್ನೆಲೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಪಂಚಾಯತ್ ಮೂಲಕ ಮನವಿ ಮಾಡಿದ್ದು ಕಾಮಗಾರಿ ಆರಂಭಗೊಳ್ಳದೆ ಇದ್ದಲ್ಲಿ ನವೆಂಬರ್ 21 ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪೆರುವಾಜೆ ಗ್ರಾಮ ಪಂಚಾಯತ್ ಸದಸ್ಯ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.