ಕಡಬದ ಕೋಡಿಂಬಾಳದಲ್ಲಿ ಪಿಕಪ್ ರಿಕ್ಷಾ ಅಪಘಾತ:
ಪಂಜದ ಬಾಲಕ ಮೃತ್ಯು

0

ಕಡಬ ತಾಲೂಕು ಕೊಡಿಂಬಾಳದಲ್ಲಿ ರಿಕ್ಷಾ – ಪಿಕಪ್ ಮಧ್ಯೆ ಪರಸ್ಪರ ನಡೆದ ಅಪಘಾತದಲ್ಲಿ
ಪಂಜದ ಬಾಲಕ ಮತ ಪಟ್ಟ ಘಟನೆ ನ.10 ಸಂಜೆ ವರದಿಯಾಗಿದೆ.
ಕೂತ್ಕುಂಜ ಗ್ರಾಮದ ಜಳಕದಹೊಳೆ ಸಮೀಪದ ಮೀನಡ್ಕ ಕಟ್ಟಪುಣಿ ನವೀನ್ ಮತ್ತು ಶ್ರೀಮತಿ ನಿಶ್ಮಿತಾ ದಂಪತಿಗಳ ಪುತ್ರ 4 ವರ್ಷ ಪ್ರಾಯದ ಹಾರ್ದಿಕ್ ಮೃತ ಪಟ್ಟ ಬಾಲಕ.

ಕೋಡಿಂಬಾಳ ಆನಂದ ಎಂಬವರ ರಿಕ್ಷಾದಲ್ಲಿ ನಿಶ್ಮಿತಾರು ಅವರು ಮಕ್ಕಳೊಂದಿಗೆ ಪಂಜ ಕಡೆಗೆ ಬರುತ್ತಿದ್ದಾಗ ಕೋಡಿಂಬಾಳ ಸಮೀಪ ಮುರ ಚಡಾವು ಎಂಬಲ್ಲಿ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಕೋಡಿಂಬಾಳ ಹರೀಶ್ ಎಂಬವರ ಪಿಕಪ್ ಪರಸ್ಪರ ಡಿಕ್ಕಿಯಾಯಿತು.

ಅಪಘಾತದಿಂದ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು ,ರಿಕ್ಷಾದಲ್ಲಿದ್ದ ಹಾರ್ದಿಕ್ ಗಂಭೀರ ಗಾಯ ಗೊಂಡಿದ್ದು
ಪುತ್ತೂರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ. ಉಳಿದವರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ಹಾರ್ದಿಕ್ ಕಡಬ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿ ಎಂದು ತಿಳಿದುಬಂದಿದೆ.