ಜೇಸಿಐ ಪಂಜ ಪಂಚಶ್ರೀ ರಜತ ರಶ್ಮಿ ಕಾರ್ಯಕ್ರಮ, ಗುತ್ತಿಗಾರಿನಲ್ಲಿ ಕುದ್ರೋಳಿ ಗಣೇಶ್‌ರಿಂದ ವಿಸ್ಮಯ ಜಾದೂ, ನಿತ್ಯಾನಂದ ಮುಂಡೋಡಿಯವರಿಗೆ ಸನ್ಮಾನ, ಮುಂಡೋಡಿ ನಿಸ್ವಾರ್ಥ ಸಹಕಾರಿ : ಸೀತಾರಾಮ ರೈ ಶ್ಲಾಘನೆ

0

ಜೇಸಿಐ ಪಂಜ ಪಂಚಶ್ರೀಯ ರಜತ ರಶ್ಮಿ ಕಾರ್ಯಕ್ರಮದ ಅಂಗವಾಗಿ ನ. 10 ರಂದು ಗುತ್ತಿಗಾರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಪಂಡಿತ್ ದೀನ್ ದಯಾಳ್ ಸಭಾಂಗಣದಲ್ಲಿ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ತಂಡದಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಿತು.

ಇದೇ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿ ಧುರೀಣ ನಿತ್ಯಾನಂದ ಮುಂಡೋಡಿಯವರನ್ನು ಜೇಸೀಐ ವತಿಯಿಂದ ಸನ್ಮಾನಿಸಲಾಯಿತು.

ಮುಂಡೋಡಿಯವರನ್ನು ಸನ್ಮಾನಿಸಿದ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸವಣೂರು ಸೀತಾರಾಮ ರೈ ಮಾತನಾಡಿ, ನಿತ್ಯಾನಂದ ಮುಂಡೋಡಿಯವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿದ ನಿಸ್ವಾರ್ಥ ಸಹಕಾರಿ ಎಂದು ಶ್ಲಾಘಿಸಿದರು. ಸೇವೆ ಮತ್ತು ಸಾರ್ವಜನಿಕ ಸಂಪರ್ಕದ ಮೂಲಕ ಪಂಜ ಜೇಸಿಐ ಮಹತ್ತರ ಸಾಧನೆ ಮಾಡಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿತ್ಯಾನಂದ ಮುಂಡೋಡಿಯವರು, ಸಹಕಾರ ಮತ್ತು ಸಾಮಾಜಿಕ ಸೇವೆಯಲ್ಲಿ ಈ ಸ್ಥಾನಕ್ಕೇರಲು ಜೇಸಿಯೇ ಕಾರಣ ಎಂದು ನೆನಪಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಜೇಸಿ ತರಬೇತುದಾರ ಎಂ.ಬಿ.ಸದಾಶಿವ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ ಭಾಗವಹಿಸಿದ್ದರು.
ಜೇಸಿಐ ಪಂಜ ಪಂಚಶ್ರೀಯ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಗುತ್ತಿಗಾರು ಸೊಸೈಟಿ ವತಿಯಿಂದ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಸೀತಾರಾಮ ರೈಯವರನ್ನು ಸನ್ಮಾನಿಸಲಾಯಿತು.

ಹಾಲೆಮಜಲು ಆದರ್ಶ ಯೂತ್ ಕ್ಲಬ್ ಅಧ್ಯಕ್ಷ ದಿನೇಶ್ ಹಾಲೆಮಜಲು, ಜೇಸಿಐ ಪಂಜ ಪಂಚಶ್ರೀ ಕಾರ್ಯದರ್ಶಿ ಕೌಶಿಕ್ ಕುಳ, ಕಾರ್ಯಕ್ರಮ ನಿರ್ದೇಶಕ ಲೋಕೇಶ್ ಆಕ್ರಿಕಟ್ಟೆ, ಬೆಳ್ಳಿ ಹಬ್ಬ ಸಮಿತಿಯ ತೀರ್ಥಾನಂದ ಕೊಡೆಂಕಿರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಜಾಕೆ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿಜೇಶ್ ಹಿರಿಯಡ್ಕ ವಂದಿಸಿದರು.