ಬೈಕ್ ಅಪಘಾತದಲ್ಲಿ ಗಾಯಗೊಂಡ ಐಟಿಐ ವಿದ್ಯಾರ್ಥಿ ತೇಜಸ್ ಗೆ ಸಹಾಯಧನ ಹಸ್ತಾಂತರ

0

ಇತ್ತೀಚೆಗೆ ಸುಳ್ಯದ ಪರಿವಾರಕಾನದಲ್ಲಿ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡ ಐಟಿ ವಿದ್ಯಾರ್ಥಿ ತೇಜಸ್ ರವರಿಗೆ ಐಟಿಐ ಅದ್ಯಾಪಕರುಗಳು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿಂದ ರೂ. 50000 ಸಹಾಯಧನವನ್ನು ವಿದ್ಯಾರ್ಥಿಯ ಮಾವನ ಮನೆ ಅರಂತೋಡು ಬೆಟ್ಟನ ವೆಂಕಟ್ರಮಣರವರ ಮನೆಗೆ ತೆರಳಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೆವಿಜಿ ಕೈಗಾರಿಕಾ ತರಬೇತಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ದಿನೇಶ್ ಮಡ್ತಿಲ, ಕಿರಿಯ ತರಬೇತಿ ಅಧಿಕಾರಿಗಳಾದ ಪ್ರವೀಣ್ ಕುಮಾರ್ ಕೆ.ಎಸ್., ದಿನೇಶ್ ಪಡ್ಡಂಬೈಲು, ಕಚೇರಿಯ ಅಧೀಕ್ಷಕರಾದ ಭವಾನಿಶಂಕರ ಅಡ್ತಲೆ ಉಪಸ್ಥಿತರಿದ್ದರು.