ಡಿಸೆಂಬರ್ 26,27 ಸುಳ್ಯದಲ್ಲಿ ಎಸ್ ಜೆ ಎಂ ರಾಜ್ಯಮಟ್ಟದ ಪ್ರತಿಭಾ ಸಂಗಮ 2022, ಕಾರ್ಯಕ್ರಮದ ಯಶಸ್ವಿಗೆ ಸ್ವಾಗತ ಸಮಿತಿ ರಚನೆ

0

ಸುನ್ನಿ ಜಮಿಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಇದರ ರಾಜ್ಯಮಟ್ಟದ ಪ್ರತಿಭಾ ಸಂಗಮ 2022 ಡಿಸೆಂಬರ್ 26 27ರಂದು ಸುಳ್ಯ ಗಾಂಧಿನಗರ ಮಸ್ಜಿದ್ ವಠಾರದಲ್ಲಿ ನಡೆಯಲಿದ್ದು ಇದರ ಪೂರ್ವಭಾವಿ ಸಭೆ ಮತ್ತು ಸ್ವಾಗತ ಸಮಿತಿ ರಚನಾಸಭೆ ಇಂದು ಗಾಂಧಿನಗರ ಮುನವಿರುಲ್ ಇಸ್ಲಾಂ ಮದರಸಾ ಸಭಾಂಗಣದಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ಗಾಂಧಿನಗರ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಹಾಜಿ ಮುಸ್ತಫಾ ಕೆ ಎಂ ಜನತಾ ವಹಿಸಿದ್ದರು.
ಸ್ಥಳೀಯ ಮಸೀದಿ ಖತೀಬರಾದ ಅಶ್ರಫ್ ಕಾಮಿಲ್ ಸಕಾಫಿ ದುವಾ ನೆರವೇರಿಸಿ ಸಭೆಯನ್ನು ಉದ್ಘಾಟಿಸಿದರು.
ಎಸ್ ಜೆ ಎಂ ರಾಜ್ಯ ಸಮಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಮದನಿ ಜೆಪ್ಪು ಮಾತನಾಡಿ ರಾಜ್ಯಮಟ್ಟದ ಪ್ರತಿಭಾ ಸಂಗಮದ ಕಾರ್ಯಕ್ರಮಗಳ ಕುರಿತು ವಿವರಗಳನ್ನು ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರತಿಭಾ ಸಂಗಮದ ರಾಜ್ಯ ಸಮಿತಿ ಸಂಚಾಲಕ ಹಾಫಿಲ್ ಮೊಹಮ್ಮದ್ ಅನೀಫಿ ಮಿಸ್ಬಾಹಿ ಕಾರ್ಯಕ್ರಮದ ರೂಪುರೇಷೆ ಗಳ ಬಗ್ಗೆ ಮಾಹಿತಿ ನೀಡಿದರು.


ಕನ್ವೀನರ್ ಇಬ್ರಾಹಿಂ ನಹೀಮಿ, ರಾಜ್ಯ ಸಮಿತಿ ಕಾರ್ಯದರ್ಶಿಗಳಾದ ಪಿ ಮಹಮ್ಮದ್ ಮದನಿ, ಅಬ್ದುಲ್ ಅಜೀಜ್ ನೂರಾನಿ, ಸುಳ್ಯ ತಾಲೂಕು ರೇಂಜ್ ಸಮಿತಿ ಅಧ್ಯಕ್ಷ ಮಹಮ್ಮದ್ ಸಕಾಪಿ ಮೊಗರ್ಪಣೆ, ಗಾಂಧಿನಗರ ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಮಹಮ್ಮದ್, ಜೊತೆ ಕಾರ್ಯದರ್ಶಿ ಕೆ ಬಿ ಅಬ್ದುಲ್ ಮಜೀದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು, ಎಸ್ ಎಂ ಎ ಸಮಿತಿ ಮುಖಂಡರುಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯಮಟ್ಟದ ಪ್ರತಿಭಾ ಸಂಗಮದ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸಂಚಾಲಕರಾಗಿ ಎಸ್ ಎಮ್ ಅಬ್ದುಲ್ ಹಮೀದ್, ಉಪ ಸಂಚಾಲಕರಾಗಿ ಹಾಜಿ ಶುಖೂರ್ ಗಾಂಧಿನಗರ, ಅಬ್ದುಲ್ ಹಮೀದ್ ಬೀಜ ಕೊಚ್ಚಿ,ಕನ್ವೀನರ್ ಇಬ್ರಾಹಿಂ ಸಕಾಫಿ ಪುಂಡೂರು,ಉಪ ಕನ್ವಿನರ್ ಮಹಮ್ಮದ್ ಸಕಾಫಿ ಮೊಗರ್ಪಣೆ,ಅಬ್ದುಲ್ ಲತೀಫ್ ಸಕಾಫಿ ಗೂನಡ್ಕ, ನಿಝರ್ ಸಕಾಫಿ ಮುಡೂರು ಆರ್ಥಿಕ ಸಮಿತಿ ಚೇರ್ಮನ್ ಹಾಜಿ ಮುಸ್ತಫಾ ಕೆ ಎಂ,ಹಾಗೂ ಬೇರೆ ಬೇರೆ ವಿಭಾಗಗಳಿಗೆ ಪದಾಧಿಕಾರಿಗಳನ್ನು ಮತ್ತು ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು.
ಶೀಘ್ರದಲ್ಲಿ ಮುಂದಿನ ಸಭೆಯನ್ನು ಕರೆದು ಕಾರ್ಯಕ್ರಮದ ಯಶಸ್ವಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಇನ್ನು ಕೆಲವು ಸದಸ್ಯರುಗಳನ್ನು ನೇಮಕ ಮಾಡುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.
ಇಬ್ರಾಹಿಂ ಸಕಾಫಿ ಪುಂಡೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.