ಸುಳ್ಯದಲ್ಲಿ ಇಂದು ನಡೆಯಲಿರುವ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟಕ್ಕೆ ಜಾತ್ರೆಯ ಸೊಬಗು, ಝಗಮಗಿಸುವ
ಆಕರ್ಷಕ ಲೈಟಿಂಗ್ಸ್ – ಸೌಂಡ್ಸ್ ,ಗ್ಯಾಲರಿ ವ್ಯವಸ್ಥೆ

0

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಆಶ್ರಯದಲ್ಲಿ ಇಂದು ನಡೆಯಲಿರುವ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟಕ್ಕೆ ಝಗಮಗಿಸುವ ಆಕರ್ಷಕ ಸೌಂಡ್ಸ್ ಮತ್ತು ಲೈಟಿಂಗ್ಸ್ ಹಾಗೂ ಪೆಂಡಾಲ್ ನ ವ್ಯವಸ್ಥೆ ಅಲ್ಲದೆ ಪಂದ್ಯಾಟದ ವೀಕ್ಷಣೆಗೆ ಗ್ಯಾಲರಿ ವ್ಯವಸ್ಥೆ ಕಲ್ಪಿಸಲಾಗಿದೆ.ನಗರದ ಮುಖ್ಯ ರಸ್ತೆಯಲ್ಲಿ ಆಕರ್ಷಕ ಮಹಾ ದ್ವಾರಗಳು ಕ್ರೀಡಾ ಭಿಮಾನಿಗಳನ್ನು ಸ್ವಾಗತಿಸಲು ಸಿದ್ಧವಾಗಿದೆ. ಜೂನಿಯರ್ ಕಾಲೇಜ್ ರಸ್ತೆ ಲೈಟಿಂಗ್ಸ್ ನಿಂದ ಬೆಳಗುತ್ತಿದೆ. ಇಡೀ ಸುಳ್ಯ ನಗರವೇ ಜಾತ್ರೆಯ ಸೊಬಗಿನಿಂದ ಕಂಗೊಳಿಸುತ್ತಿದೆ.

ತಾಲೂಕಿನಾದ್ಯಂತ ಅಲ್ಲಲ್ಲಿ ಸ್ವಾಗತದ ಬ್ಯಾನರ್ ರಾರಾಜಿಸುತ್ತಿದೆ. ಒಟ್ಟಾರೆಯಾಗಿ ಹೇಳುವುದಾದರೆ ವರ್ಷವಿಡೀ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಜಾತ್ರೆ ,ಬ್ರಹ್ಮಕಲಶೋತ್ಸವ ,ಯಕ್ಷಗಾನ, ಕ್ರೀಡಾಕೂಟ, ಉರೂಸ್, ಕ್ರಿಸ್ ಮಸ್ ಮುಂತಾದ ಎಲ್ಲಾ ರೀತಿಯ ಸಭೆ ಸಮಾರಂಭ ಗಳಿಗೆ, ಮದುವೆ ,ಹಬ್ಬ ಹರಿದಿನಗಳಲ್ಲಿ ಧ್ವನಿ ಬೆಳಕು ಶಾಮಿಯಾನ ಪೆಂಡಾಲಿನ ವ್ಯವಸ್ಥೆಯ ನಿರ್ವಹಣೆ ಮಾಡುವುದರೊಂದಿಗೆ ನಮ್ಮ ಕಾರ್ಯಕ್ರಮದ ಸಂಪೂರ್ಣ ಯಶಸ್ಸಿನ ಪಾಲುದಾರರು ಎಂದೆನಿಸಿಕೊಳ್ಳುವ ಈ ಸಂಘದ ಸದಸ್ಯರು ಹಮ್ಮಿಕೊಂಡಿರುವ ಪ್ರಥಮ ಅದ್ದೂರಿಯ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ಕಬಡ್ಡಿ ಪಂದ್ಯಾಟದ ಯಶಸ್ಸಿಗೆ ಕೈಜೋಡಿಸಿ ಕೃತಜ್ಞತೆ ಸಲ್ಲಿಸಬೇಕಲ್ಲವೇ.