ಸುಳ್ಯ: ಮರಾಟಿ ಸಂಘದ ಮಿನಿ‌ ಸಭಾಭವನ ಶ್ರೀ ಮಹಮ್ಮಾಯಿ ಲೋಕಾರ್ಪಣೆ

0

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಮಿನಿ ಸಭಾಭವನ ಮಹಮ್ಮಾಯಿ ಲೋಕಾರ್ಪಣೆ ನ. 12ರಂದು ನಡೆಯಿತು. ಅಭಿರಾಮ ಭಟ್ ಅರಂಬೂರುರವರ ನೇತೃತ್ವದಲ್ಲಿ ಗಣಹೋಮ ನಡೆಯಿತು.

ಸಂಘದ ಸ್ಥಾಪಕಾಧ್ಯಕ್ಷ ಜಿ. ದೇವಪ್ಪ ನಾಯ್ಕ್ ನೂತನ ಸಭಾಂಗಣವನ್ನು ಉದ್ಘಾಟಿಸಿದರು. ಸಂಘದ ಕಾರ್ಯದರ್ಶಿ ಬಾಲಕೃಷ್ಣ ನಾಯ್ಕ್ ಅಜ್ಜಾವರ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.

ಅಧ್ಯಕ್ಷ ಜನಾರ್ಧನ್ ಬಿ ಕುರುಂಜಿಭಾಗ್, ಕೋಶಾಧಿಕಾರಿ ಭವಾನಿಶಂಕರ ಕಲ್ಮಡ್ಕ, ಗೌರವಾಧ್ಯಕ್ಷ ಸೀತಾನಂದ ಬೇರ್ಪಡ್ಕ, ಕ್ರೀಡಾ ಕಾರ್ಯದರ್ಶಿ ಜನಾರ್ಧನ ನಾಯ್ಕ್ ಕೇರ್ಪಳ
ಸಂಘಟನಾ ಕಾರ್ಯದರ್ಶಿ ಈಶ್ವರ ವಾರಣಾಶಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಶೋಭ ಎ.ಕೆ. ನಾಯ್ಕ್, ಶ್ರೀಮತಿ ಸುಲೋಚನ ನಾರಾಯಣ ಕುರುಂಜಿಗುಡ್ಡೆ, ಸ್ಥಾಪಕ ಕಾರ್ಯದರ್ಶಿ ಗೋಪಾಲ ನಾಯ್ಕ್ ದೊಡ್ಡೇರಿ, ಮಾಜಿ ಅಧ್ಯಕ್ಷರುಗಳಾದ ನಾರಾಯಣ ನಾಯ್ಕ್ ಬೀರಮಂಗಲ, ಎ.ಕೆ. ನಾಯ್ಕ್ ಅಮೆಬೈಲು, ಜಿ. ಬುದ್ಧ ನಾಯ್ಕ್, ಮಾಜಿ ಕೋಶಾಧಿಕಾರಿ ರಘುನಾಥ ಜಟ್ಟಿಪಳ್ಳ,
ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ಗಿರಿಜಾ ಜನಾರ್ಧನ ನಾಯ್ಕ್ ಕೊಡಿಯಾಲಬೈಲು, ಉಪಾಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಡಿ, ಯುವ ವೇದಿಕೆಯ ಕಾರ್ಯದರ್ಶಿ ಉದಯಕುಮಾರ್, ಸದಸ್ಯ ಮಾಯಿಲಪ್ಪ ನಾಯ್ಕ್ ಮಂಡೆಕೋಲು, ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಜನಾರ್ಧನ ನಾಯ್ಕ್ ಕೊಡಿಯಾಲಬೈಲು, ಶ್ರೀಮತಿ ಜಯಲಕ್ಷ್ಮಿ ಜನಾರ್ಧನ್ ಬಿ. ಕುರುಂಜಿಭಾಗ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.