ನಾಳೆ(ನ. 13) ಸುಳ್ಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ `ವರ್ಣ ಚಿತ್ತಾರ-2022′ ಚಿತ್ರಕಲಾ ಸ್ಪರ್ಧೆ

0


ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸುಳ್ಯ, ರೋಟರಿ ಸುಳ್ಯ, ಇಂಟರ್‍ಯಾಕ್ಟ್ ಕ್ಲಬ್ ರೋಟರಿ ಶಾಲೆ ಮಿತ್ತಡ್ಕ, ಸುಳ್ಯ ಮತ್ತು ಸುದ್ದಿ ಬಿಡುಗಡೆ ಪತ್ರಿಕೆ, ಸುದ್ದಿ ವೆಬ್‌ಸೈಟ್ ಹಾಗೂ ಸುದ್ದಿ ಚಾನೆಲ್ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆಯ ಪ್ರಯುಕ್ತ ಸುಳ್ಯ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ ವರ್ಣ ಚಿತ್ತಾರ-2022 ಸ್ಪರ್ಧೆಯು ನ. 13 ರಂದು 9.3೦ಕ್ಕೆ ಸರಿಯಾಗಿ ರೋಟರಿ ಪ್ರಾಥಮಿಕ ಶಾಲಾ ಸಭಾಭವನದಲ್ಲಿ ನಡೆಯಲಿದೆ.
ಚಿತ್ರಕಲಾ ಸ್ಪರ್ಧೆಗಳು: ವಿಭಾಗ-1: ಎಲ್.ಕೆ.ಜಿ, ಯು.ಕೆ.ಜಿ. ವಿಭಾಗ-2: 1ನೇ, 2ನೇ, ವಿಭಾಗ-3 : 3ನೇ, 4ನೇ. (ವಿ.ಸೂ.: 1ನೇ ತರಗತಿಯಿಂದ ೪ನೇ ತರಗತಿವರೆಗಿನ ಸ್ಪರ್ಧಿಗಳಿಗೆ ಪೂರ್ವಾಹ್ನ 1೦.3೦ಕ್ಕೆ ಸರಿಯಾಗಿ ಸ್ಪರ್ಧೆ ಪ್ರಾರಂಭಗೊಳ್ಳಲಿರುವುದು.) ವಿಭಾಗ-4: 5ನೇ, 6ನೇ, ವಿಭಾಗ-5: 7ನೇ, 8ನೇ, ವಿಭಾಗ-6: 9ನೇ, 1೦ನೇ ಎಂದು ಆರು ವಿಭಾಗಗಳಲ್ಲಿ ನಡೆಯಲಿವೆ. (ವಿ.ಸೂ.: 5ರಿಂದ 1೦ನೇ ತರಗತಿವರೆಗಿನ ಸ್ಪರ್ಧಿಗಳು ಪೂರ್ವಾಹ್ನ 9.3೦ಕ್ಕೆ ಹಾಜರಿರಬೇಕು) ಡ್ರಾಯಿಂಗ್ ಹಾಳೆಯನ್ನು ಒದಗಿಸಲಾಗುವುದು.

ಚಿತ್ರ ಬಿಡಿಸುವ ಪರಿಕರಗಳನ್ನು ವಿದ್ಯಾರ್ಥಿಗಳೇ ತರತಕ್ಕದ್ದು. ಪ್ರತೀ ವಿಭಾಗದಲ್ಲಿ ಉತ್ತಮ 5 ಕಲಾಕೃತಿಗಳನ್ನು ಆಯ್ಕೆ ಮಾಡಲಾಗುವುದು. ಸುಳ್ಯ ತಾಲೂಕಿನ ಯಾವುದೇ ಶಾಲೆಯ ಆಸಕ್ತ ಎಲ್ಲಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ.


ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರದೊಂದಿಗೆ ಬಹುಮಾನ ನೀಡಲಾಗುವುದು ಎಂದು ಸಂಘಟಕರಾದ ಶ್ರೀಹರಿ ಪೈಂದೋಡಿ ಹಾಗೂ ಪ್ರಸನ್ನ ಐವರ್ನಾಡು ತಿಳಿಸಿದ್ದಾರೆ.
ಬೆಳಿಗ್ಗೆ ೯.೩೦ಕ್ಕೆ ಉದ್ಘಾಟನೆಯನ್ನು ಸುಳ್ಯ ರೋಟರಿ ವಿದ್ಯಾಸಂಸ್ಥೆಯ ಸಂಚಾಲಕರಾದ ರೋ| ಗಿರಿಜಾಶಂಕರ್ ತುದಿಯಡ್ಕ ನೆರವೇರಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷರಾದ ರೋ| ಚಂದ್ರಶೇಖರ ಪೇರಾಲು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುದ್ದಿ ಸಮೂಹ ಸಂಸ್ಥೆಗಳ ಮ್ಹಾಲಕರಾದ ಡಾ. ಯು.ಪಿ.ಶಿವಾನಂದ, ಜೂನಿಯರ್ ಕಾಲೇಜಿನ ಅಧ್ಯಾಪಕರಾದ ಡಾ. ಸುಂದರ್ ಕೇನಾಜೆ ಹಾಗೂ ಬೆಂಗಳೂರಿನ ಉದ್ಯಮಿಗಳಾದ ಅನಂತರಾಜ್ ಮಾಪನ ಭಾಗವಹಿಸಲಿದ್ದಾರೆ.
ಇಂಟರ್‍ಯಾಕ್ಟ್ ಕ್ಲಬ್ ಸಭಾಪತಿಗಳಾದ ರೊ| ದಯಾನಂದ ಆಳ್ವ, ರೋಟರಿ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವೀಣಾ ಶೇಡಿಕಜೆ, ರೋಟರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹರಿಣಾಕ್ಷಿ, ಇಂಟರ್‍ಯಾಕ್ಟ್ ಕ್ಲಬ್‌ನ ಅಧ್ಯಕ್ಷೆ ಸನಿಹ ಶೆಟ್ಟಿ ಗೌರವ ಉಪಸ್ಥಿತರಿರುತ್ತಾರೆ.