ಸಾರ್ವಜನಿಕ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಸುಳ್ಯ ಅಧ್ಯಕ್ಷರಾಗಿ ಜನಾರ್ದನ ಗೌಡ ದೋಳ ಆಯ್ಕೆ

0

ಸಾರ್ವಜನಿಕ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಸುಳ್ಯ ಇದರ ನೂತನ ಅಧ್ಯಕ್ಷರಾಗಿ ಜನಾರ್ದನ ದೋಳ ಆಯ್ಕೆಯಾಗಿದ್ದಾರೆ.
ನ. 7 ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಶಿವಪ್ರಕಾಶ್ ಅಡ್ಪಂಗಾಯ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು ನೂತನ ಅಧ್ಯಕ್ಷರಾಗಿ ಜನಾರ್ದನ ದೋಳ, ಕಾರ್ಯದರ್ಶಿಯಾಗಿ ಸತೀಶ್ ಹಂಡನಮನೆ ಕಾನತ್ತಿಲ, ಕೋಶಾಧಿಕಾರಿಯಾಗಿ ನ್ಯಾಯವಾದಿ ರಾಮಕೃಷ್ಣ ಎ. ಆಯ್ಕೆಯಾದರು.

ಶಿವಪ್ರಕಾಶ್ ಅಡ್ಪಂಗಾಯ ಅವರನ್ನು ಗೌರವ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸಂಜೀವ ಬೆಟ್ಟಂಪಾಡಿ, ಜತೆ ಕಾರ್ಯದರ್ಶಿಯಾಗಿ ಸುಧಾಕರ ಕುರುಂಜಿಬಾಗ್, ನಿರ್ದೇಶಕರುಗಳಾಗಿ ಸತೀಶ್ ಜಟ್ಟಿಪಳ್ಳ, ರಾಧಾಕೃಷ್ಣ ಹನಿಯಡ್ಕ, ಶಿವಣ್ಣ ಮಂಡೆಕೋಲು, ಧನಂಜಯ ಪಲ್ಲತಡ್ಕ, ಚಂದ್ರಶೇಖರ ಅಡ್ಪಂಗಾಯ, ದೀಕ್ಷಿತ್ ಜಯನಗರ, ಬಾಲಸುಬ್ರಮಣ್ಯ, ಸುಂದರ ಕಾಂತಮಂಗಲ, ಕೇಶವ ಸೂರ್ತಿಲ, ರಾಜೇಶ್ ಮಾಡಬಾಗಿಲು ಆಯ್ಕೆಯಾದರು.


ಸಭೆಯಲ್ಲಿ ಡಿ.ಆರ್. ಕೆಂಚಪ್ಪ ಗುರುಸ್ವಾಮಿ, ಕಾನತ್ತಿಲ ಸಂತೋಷ್ ಗುರುಸ್ವಾಮಿ, ಜಟ್ಟಿಪಳ್ಳ ಸಂಜೀವ ಗುರುಸ್ವಾಮಿ, ಪೆರುಮುಂಡ ಸೋಮನಾಥ ಗುರುಸ್ವಾಮಿ ಉಪಸ್ಥಿತರಿದ್ದರು.

ದಶಂಬರ 10 ರಂದು ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಡಿ.ಆರ್.ಕೆಂಚಪ್ಪ ಗುರುಸ್ವಾಮಿ ಯವರ ನೇತೃತ್ವದಲ್ಲಿ ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ನಡೆಯಲಿದೆ.