ಗಂಗಮ್ಮ ಮೋಂಟಡ್ಕರಿಗೆ ಶ್ರದ್ಧಾಂಜಲಿ ಸಭೆ

0

ನ. 1ರಂದು ನಿಧನರಾದ ಮೋಂಟಡ್ಕ ಪುಟ್ಟಣ್ಣ ಗೌಡರ ಧರ್ಮಪತ್ನಿ ಬೆಳ್ಳಾರೆ ಶಿಕ್ಷಣ ಗಂಗಾ ಟ್ರಸ್ಟ್‌ನ ಟ್ರಸ್ಟಿ ಶ್ರೀಮತಿ ಗಂಗಮ್ಮ ಮೋಂಟಡ್ಕರವರಿಗೆ ಶ್ರದ್ಧಾಂಜಲಿ ಸಭೆ ನ. 12ರಂದು ಸುಳ್ಯದ ಅಮರಶ್ರೀಭಾಗ್ ನ ಡಾ. ಕುರುಂಜಿ ವೆಂಕಟ್ರಮಣ ಗೌಡ ಸಮುದಾಯ ಭವನದಲ್ಲಿ ಮೃತರ ಉತ್ತರಕ್ರಿಯೆಯ ಸಂದರ್ಭದಲ್ಲಿ ನಡೆಯಿತು.

ಲಯನ್ಸ್ ಮಾಜಿ ಗವರ್ನರ್ ಎಂ.ಬಿ. ಸದಾಶಿವ ಸ್ವಾಗತಿಸಿ ಮೃತರಿಗೆ ನುಡಿನಮನ ಸಲ್ಲಿಸಿದರು. ಮೃತರ ಪತಿ ಪುಟ್ಟಣ್ಣ ಗೌಡ ಮೋಂಟಡ್ಕ, ಪುತ್ರರಾದ ಬೆಳ್ಳಾರೆ ಜ್ಞಾನ ಗಂಗಾ ಸೆಂಟ್ರಲ್ ಸ್ಕೂಲ್ ನ ಸಂಚಾಲಕರಾದ ಎಂ.ಪಿ. ಉಮೇಶ್, ಕಿರಿಯ ಪುತ್ರ ಎಂ.ಪಿ. ಗೋಪಿನಾಥ್, ಸೊಸೆಯಂದಿರು, ಮೊಮ್ಮಕ್ಕಳು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ಸರಕಾರದ ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ ಸೇರಿದಂತೆ ಹಲವಾರು ಗಣ್ಯರು,
ಮೃತರ ಬಂಧುಗಳು, ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.