ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓರಿಯಂಟೇಶನ್ ಕಾರ್ಯಕ್ರಮ

0

ಡಾ. ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ಳಾರೆ, ಇದರ ವಾಣಿಜ್ಯ ಶಾಸ್ತ್ರ ವಿಭಾಗದ ಹಾಗೂ ಪ್ಲೇಸ್ ಮೆಂಟ್ ಸೆಲ್ ವತಿಯಿಂದ ಬಿಕಾಂ, ಬಿಎ, ಮತ್ತು ಬಿಎಸ್ಡಬ್ಲ್ಯೂ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ದ ಅನಿವಾರ್ಯತೆ ಕುರಿತು “ಓರಿಯೆಂಟೇಶನ್ ಕಾರ್ಯಕ್ರಮ” ನ.10 ರಂದು ಕಾಲೇಜಿನ ಬಿ. ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ನಡೆಯಿತು.


ಕಾಲೇಜಿನ ಪ್ರಾಂಶುಪಾಲರಾದ
ದಾಮೋದರ ಕೆ. ಅಧ್ಯಕ್ಷ ತೆಯನ್ನು ವಹಿಸಿದ್ದರು. ವಾಣಿಜ್ಯ ಶಾಸ್ತ್ರ ವಿಭಾಗದ. ಮುಖ್ಯಸ್ಥರು ಹಾಗೂ ಪ್ಲೇಸ್ಮೆಂಟ್ ಆಫೀಸರ್ ಆದ ಶ್ರೀಮತಿ ಸುನೀತಾ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ವ್ಯಾಸಂಗ ದ ಜೊತೆ
ಅವಕಾಶಗಳನ್ನು ಸೃಷ್ಟಿಸಿ ಕೊಳ್ಳುವ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಹರಿಪ್ರಸಾದ್ “ಸ್ಮಾರ್ಟ್ ಕಂಪ್ಯೂಟರ್” ಇದರ ಮುಖ್ಯಸ್ಥ ರು ಕಾರ್ಯಕ್ರಮದಲ್ಲಿ ಮಾಹಿತಿ ನೀಡುತ್ತ ಕಂಪ್ಯೂಟರ್ ಜ್ಞಾನದ
ಅನಿವಾರ್ಯತೆ ಬಗ್ಗೆ ಮಾತನಾಡುತ್ತಾ ತಮ್ಮ ಅನುಭವವನ್ನು ಹಂಚಿಕೊಂಡರು.. ದ್ವಿತೀಯ ಬಿ. ಕಾಂ. ವಿದ್ಯಾರ್ಥಿನಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.ಅಧ್ಯಾಪಕರಾದ ಶಾಂತಮಣಿ ,ಪ್ರತಿಮಾ ಮತ್ತು ಕಾಂತರಾಜು ಉಪಸ್ಥಿತರಿದ್ದರು. ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.