ನಿರಂತರ ಕಲಿಕೆಯೊಂದಿಗೆ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಿ: ಡಾ. ಕೆ. ವಿ. ಚಿದಾನಂದ

0

2022-23 ಸಾಲಿನ ಪ್ರಥಮ ವರ್ಷದ ಬಿ.ಎಸ್ಸಿ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಬಿ.ಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಮತ್ತು ಮಾಹಿತಿ ಕಾರ್ಯಗಾರವು ನವಂಬರ 11 ರಂದು ಕೆ.ವಿ.ಜಿ. ಮೆಡಿಕಲ್ ಕಾಲೇಜ್ ಸಭಾಂಗಣದಲ್ಲಿ ನಡೆಯಿತು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕದ ಸೆನೆಟ್ ಸದಸ್ಯರು ಮತ್ತು ಬಸವೇಶ್ವರ ಅಲೈಡ್ ಹೆಲ್ತ್‌ ಸೈನ್ಸಸ್ ಚಿತ್ರದುರ್ಗದ ಪ್ರಾಂಶುಪಾಲರಾದ ಡಾ. ನಾರಾಯಣ ಮೂರ್ತಿ.ಸಿ.ರವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಶುಶೂಷಕರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಹೊರತಾಗಿ ಆರೋಗ್ಯ ಕ್ಷೇತ್ರವನ್ನು ಆರೋಗ್ಯಕರ ರೀತಿಯಲ್ಲಿ ನಡೆಸಲು ಸಾಧ್ಯವಿಲ್ಲ. ಆರೋಗ್ಯ ಕೇಂದ್ರಗಳು (ಆಸ್ಪತ್ರೆಗಳು) ಯಶಸ್ವಿ ಅನ್ನಿಸಿಕೊಳ್ಳಲು ನುರಿತ ಶುಶೂಷಕರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿದ್ದರಷ್ಟೇ ಸಾಧ್ಯ ಎಂಬುದಾಗಿ ಅಭಿಪ್ರಾಯಪಟ್ಟರು.

ಭಾಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷರಾದ ಡಾ. ಕೆ.ವಿ. ಚಿದಾನಂದ ರವರು ತಮ್ಮ ವೈದ್ಯಕೀಯ ವೃತ್ತಿ ಜೀವನದ ಸುದೀರ್ಘ ಅನುಭವವನ್ನು ಹಂಚಿಕೊಂಡು ಪ್ರಾಯೋಗಿಕ ಕಲಿಕೆಯ ಮಹತ್ವವನ್ನು ಒತ್ತಿ ಹೇಳಿದರು. ನಿರಂತರ ಕಲಿಕೆಯೊಂದಿಗೆ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಿ ಎಂಬುದಾಗಿ ಕರೆ ನೀಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಡೀನ್ ಡಾ. ನೀಲಾಂಬಿ ನಟರಾಜನ್‌ರವರು ತನ್ನ ಅಧೀನ ಸಂಸ್ಥೆಯಲ್ಲಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಸ್ವಾಗತವನ್ನು ಕೋರಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬಿ.ಎಸ್ಸಿ ಅಲೈಡ್ ಹೆಲ್ತ್ ಸೈನ್ಸಸ್‌ನ ಶೈಕ್ಷಣಿಕ ಸಂಯೋಜಕಿ ಮತ್ತು ರೋಗ ಲಕ್ಷಣ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ನವ್ಯ ಬಿ.ಎನ್ ಸಂಸ್ಥೆಯ ನಿಯಮಗಳು ಮತ್ತು ವಿಶ್ವವಿದ್ಯಾನಿಲಯದ ಸಾಮಾನ್ಯ ಅರ್ಹತೆಯ ಮಾನದಂಡದ ಬಗ್ಗೆ ಮಾತನಾಡಿದರು. ಸೂಕ್ಷ್ಮ ವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ನಮ್ರತ ದಿನೇಶ್ ಸಂಸ್ಥೆಯ ಧೈಯೋದ್ಧೇಶದ ಬಗ್ಗೆ ತಿಳಿಸಿದರು.

ಕೆ.ವಿ.ಜಿ. ಇನ್ಸ್‌ಟ್ಯೂಟ್ ನರ್ಸಿಂಗ್ ಸೈನ್ಸಸ್‌ನ ಪ್ರಾಂಶುಪಾಲೆ ಪ್ರೊ. ಪ್ರೇಮ ಬಿ.ಎಂ ಸಂಸ್ಥೆಯ ಶಿಸ್ತು ಮತ್ತು ಹ್ಯಾಗಿಂಗ್ ನಿಯಮಾವಳಿಯ ಬಗ್ಗೆ ವಿವರಿಸಿದರು. ಪ್ರೊ. ಪ್ರಮೋದ್, ಬಿ.ಎಸ್ಸಿ ನರ್ಸಿಂಗ್ ಕೋರ್ಸಿನ ಶೈಕ್ಷಣಿಕ ಪರಿನಿಯಮಾವಳಿಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ವೈದ್ಯಕೀಯ ಕಾಲೇಜಿನ ರಿಜಿಸ್ಟ್ರಾ‌ ಡಾ. ಸಂದೇಶ್ ಕೆ.ಎಸ್‌, ವಿವಿಧ ವೈದ್ಯಕೀಯ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶರೀರ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಶಿಲ್ಪ ಎನ್ ಬಿಜೂರ್ ಮತ್ತು ಜೀವ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀಮತಿ ಪ್ರಜ್ಞ ರವರು ನಿರೂಪಿಸಿ, ಪ್ರೊ. ಚಂದ್ರಾವತಿ ಕೆ.ಎಸ್ ಪ್ರಾಂಶುಪಾಲರು ಕೆ.ವಿ.ಜಿ. ಇನ್ಸ್‌ಟ್ಯೂಟ್ ನರ್ಸಿಂಗ್ ವಂದಿಸಿದರು.