ಅಲ್ಪಸಂಖ್ಯಾತರ ಹೆಸರು ಮತದಾರರ ಪಟ್ಟಿಯಿಂದ ತೆಗೆದು ವಂಚನೆ : ಟಿ.ಎಂ. ಶಹೀದ್ ಬೇಸರ

0

ಮತದಾರರ ಪಟ್ಟಿಯಿಂದ ಅಲ್ಪಸಂಖ್ಯಾತರ ಹೆಸರನ್ನು ತೆಗೆಯುವುದರ ಮೂಲಕ ಅಧಿಕಾರಿಗಳು ವಂಚನೆ ಮಾಡುತ್ತಿದ್ದಾರೆ. ಈ ಕುರಿತು ಚುನಾವಣಾ ಕಮಿಷನ್‌ಗೆ ದೂರು ನೀಡಲಾಗುವುದು ಎಂದು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್ ಹೇಳಿದ್ದಾರೆ.


ನ.೧೨ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮತದಾರರ ಪಟ್ಟಿಯಿಂದ ಮುಸ್ಲಿಂ ರ ಹೆಸರನ್ನು ಅಧಿಕಾರಿಗಳು ತೆಗೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದು ಸರಿಯಲ್ಲ. ಈ ಊರಿನಲ್ಲಿದ್ದು ಇನ್ನೊಂದು ಊರಿಗೆ ಕೆಲಸಕ್ಕೆ ಂದು ಹೋಗಿ ೬ ತಿಂಗಳು ಅಲ್ಲಿದ್ದರೆ ಸಾಕು. ಈ ಮಾಹಿತಿಯನ್ನು ಅಧಿಕಾರಿಗಳು ಪಡೆದು ಅಂತವರ ಹೆಸರನ್ನು ಪಟ್ಟಿಯಿಂದ ತೆಗೆಯುತ್ತಿದ್ದಾರೆ. ಈಗಾಗಲೇ ನಾವು ಎಲ್ಲ ಮಸೀದಿಗಳಿಗೆ, ಎಸ್.ಕೆ.ಎಸ್.ಎಸ್.ಎಫ್., ಎಸ್‌ಎಸ್‌ಎಓ, ಸಲಾಫಿ, ಜಮಾತೆ ಸ್ಲಾಂ ಹೀಗೆ ಎಲ್ಲ ಸಂಘಟನೆಗಳಿಗೆ ಮಾಹಿತಿ ನೀಡಿ ತಮ್ಮ ವ್ಯಾಪ್ತಿಯಲ್ಲಿ ೧೮ ವರ್ಷ ತುಂಬಿದವರನ್ನು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ಹಾಗೂ ಪಟ್ಟಿಯನ್ನು ಪರಿಶೀಲಿಸಲು ಕೇಳಿಕೊಳ್ಳುತ್ತಿzವೆ. ಮತದಾನ ಎನ್ನುವುದು ಪ್ರತಿಯೊಬ್ಬನ ಹಕ್ಕು. ಆತ ಕೆಲಸ ಸಮಯ ಊರಲ್ಲಿ ಇರಲಿಲ್ಲವೆಂಬ ಕಾರಣಕ್ಕೆ ಪಟ್ಟಿಯಿಂದಲೇ ತೆಗೆದುಹಾಕುವ ಕೆಲಸ ಸರಿಯಲ್ಲ. ಬಿಜೆಪಿ ಹೊರತು ಪಡಿಸಿ ಜಾತ್ಯಾತೀತ ಸಂಘಟನೆಗಳು, ಕಾಂಗ್ರೆಸ್ ಇತ್ಯಾದಿ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆಯುವುದು ಕಂಡು ಬಂದಿದೆ ಎಂದು ಅವರು ಹೇಳಿದರು.


ಟಿಪ್ಪು ಸುಲ್ತಾನರ ಅವಹೇಳನ ಖಂಡನೀಯ : ದೇಶ ಪ್ರೇಮಿ, ಕನ್ನಡಾಭಿಮಾನಿ ಟಿಪ್ಪು ಸುಲ್ತಾನ್ ದೇಶ ದ್ರೋಹಿ, ಹಿಂದೂ ವಿರೋಧಿ ಎಂದು ಹೇಳಿ ಅವರನ್ನು ಅವಹೇಳನ ಮಾಡುವ ಕೆಲಸ ಕೆಲವು ಸಂಘಟನೆಗಳಿಂದ ಆಗುತ್ತಿದೆ. ಇದನ್ನು ನಾವು ಖಂಡಿಸುವುದಾಗಿ ಟಿ.ಎಂ. ಶಹೀದ್ ಹೇಳಿದರು.
ಟಿಪ್ಪು ಸುಲ್ತಾನ್ ೧ ಲಕ್ಷ ಕೊಡವರನ್ನು ಕೊಂದಿದ್ದಾನೆ. ಮತ ಪರಿವರ್ತನೆ ಮಾಡಿದ್ದಾನೆ ಎನ್ನುವುದು ಸುಳ್ಳು. ಆ ಕಾಲದಲ್ಲಿ ಅಷ್ಟು ಜನ ಸಂಖ್ಯೆ ಇರಲು ಸಾಧ್ಯವಿಲ್ಲ. ಈ ರೀತಿಯ ಅಪಪ್ರಚಾರ ಸರಿಯಲ್ಲ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠೀಯಲ್ಲಿ ಸಿದ್ದಿಕ್ ಕೊಕ್ಕೊ, ಹನೀಫ್ ಬೀಜಕೊಚ್ಚಿ ಇದ್ದರು.