ಸುಳ್ಯದಲ್ಲಿ ಅದ್ದೂರಿಯ ಹೊನಲು ಬೆಳಕಿನ ರೋಮಂಚನಕಾರಿ ಕಬಡ್ಡಿ ಪಂದ್ಯಾಟ, ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಸಂಘದ‌ ಆಯೋಜನೆ, ಆಕರ್ಷಕ ಝಗ ಮಗಿಸುವ ಬೆಳಕಿನಾಟ
ಕಿಕ್ಕಿರಿದು ಸೇರಿದ ಪ್ರೇಕ್ಷಕ ಕ್ರೀಡಾಭಿಮಾನಿಗಳು

0

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 7 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸುಳ್ಯ ವಿಧಾನಸಭಾ ಕ್ಷೇತ್ರದ ಆಹ್ವಾನಿತ ತಂಡಗಳ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಎದುರಿನ ಜೆ.ಒ.ಸಿ ಮೈದಾನದಲ್ಲಿ ನ.12 ರಂದು ಅದ್ದೂರಿಯಾಗಿ ನಡೆಯಿತು.


ಸಂಜೆ ಕ್ರೀಡಾಪಟುಗಳ ಆಕರ್ಷಣೀಯ ಪಥ ಸಂಚಲನ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿಯ ಕೆ.ವಿ.ಜಿ ಪುತ್ಥಳಿಗೆ ಹಾರಾರ್ಪಣೆ ಮಾಡಿ ಮುಖ್ಯ ರಸ್ತೆಯಲ್ಲಿ ಸಾಗಿ ಬಂತು. ನಗರ ಪಂಚಾಯತ್ ಸದಸ್ಯ ಎಂ.ವೆಂಕಪ್ಪ ಗೌಡ ರವರು ಪಥ ಸಂಚಲನಕ್ಕೆ ಚಾಲನೆ ನೀಡಿದರು.
ಬಳಿಕ ನಡೆದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮೀನುಗಾರಿಕೆ ಬಂದರು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ರವರು ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ,ಶಾಮಿಯಾನ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ವಿಟ್ಲ, ಸುಳ್ಯ ನ.ಪಂ.ಸದಸ್ಯರಾದ ಎಂ.ವೆಂಕಪ್ಪ ಗೌಡ, ಶ್ರೀಮತಿ ಕಿಶೋರಿ ಶೇಟ್,
ಸುಳ್ಯ ತಹಶಿಲ್ದಾರರು ಕು.ಅನಿತಾಲಕ್ಷ್ಮೀ, ಕೆ.ವಿ.ಜಿ.ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಪ್ರಾಂಶುಪಾಲರು ಡಾ.ಲೀಲಾಧರ ಡಿ.ವಿ, ಧ್ವನಿ ಬೆಳಕು ಮಾಲಕರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ, ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ.ಮಾಧವ, ಲಯನ್ಸ್ ಮಾಜಿ ಉಪರಾಜ್ಯಪಾಲ ಎಂ.ಬಿ.ಸದಾಶಿವ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ನ.ಪಂ.ಮಾಜಿ ಸದಸ್ಯ ಕೆ.ಎಂ.ಮುಸ್ತಾಫ, ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಪ್ರ.ಕಾರ್ಯದರ್ಶಿ ಕೆ.ಟಿ.ವಿಶ್ವನಾಥ,ಸಂಘದ ಕಾನೂನು ಸಲಹೆಗಾರ ಮಹೇಶ್ ಭಟ್, ಉಬರಡ್ಕ ಪಂ.ಮಾಜಿ ಅಧ್ಯಕ್ಷ ಹರೀಶ್ ರೈ ಉಬರಡ್ಕ, ಕಬಡ್ಡಿ ತೀರ್ಪುಗಾರ ದೊಡ್ಡಣ್ಣ ಬರೆಮೇಲು, ಸಂಘದ ಗೌರವಾಧ್ಯಕ್ಷ ಎಸ್. ಪಿ.ಲೋಕನಾಥ್, ಸ್ಥಾಪಕಾಧ್ಯಕ್ಷ ಹಸನ್ ಸುಳ್ಯ, ಅಧ್ಯಕ್ಷ ಗಿರಿಧರ್ ಸ್ಕಂದ ರವರು ವೇದಿಕೆಯಲ್ಲಿ
ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಸಂಘದ ವತಿಯಿಂದ ಸಚಿವ ಎಸ್.ಅಂಗಾರ ರವರನ್ನು ಹಾಗೂ ಧ್ವನಿ ಬೆಳಕು ಮಾಲಕರು ಹಿರಿಯರಾದ ಕೆದಿಲ ನರಸಿಂಹ ಭಟ್,ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ, ಸಂಘದ ಗೌರವಾಧ್ಯಕ್ಷ ಎಸ್.ಪಿ.ಲೋಕನಾಥ್, ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಕು.ಸಾತ್ವಿ ಎಂ.ಎ ಯವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘವನ್ನು ಕನ್ನಡ ಸಂಸ್ಕ್ರತಿ ಇಲಾಖೆಯ ವ್ಯಾಪ್ತಿಗೆ ಅಧಿಕೃತವಾಗಿ ಸೇರಿಸುವಂತೆ ಹಾಗೂ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಜಾಗ ಮಂಜೂರು ಮಾಡಿಸಿಕೊಡುವಂತೆ ಸಂಘದ ಪದಾಧಿಕಾರಿಗಳು ಸಚಿವರಿಗೆ ಮನವಿಯನ್ನು ನೀಡಿದರು.
ಗಾಯಕಿ ವಿಜಯಶ್ರೀ ಮುಳ್ಯ ಪ್ರಾರ್ಥಿಸಿದರು. ಗುರುಪ್ರಸಾದ್ ಶಾಮಿಯಾನದ ಗುರುದತ್ ನಾಯಕ್ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಸುಬ್ರಹ್ಮಣ್ಯ ಪಂಚಾಯತ್ ಸದಸ್ಯ ರಾಜೇಶ್ ಎಂ.ಎಸ್ ಸನ್ಮಾನ ಪತ್ರ ವಾಚಿಸಿದರು.
ಸಂಘದ ಅಧ್ಯಕ್ಷ ಗಿರಿಧರ್ ಸ್ಕಂದ ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಾಟದ ಆರಂಭದಲ್ಲಿ ಗಾಯಕ ಬಾಲಕೃಷ್ಣ ನೆಟ್ಟಾರು ಮತ್ತು ಬಳಗದವರಿಂದ ಅದ್ದೂರಿಯ ಸಂಗೀತ ರಸಮಂಜರಿ ಕಾರ್ಯಕ್ರಮ ಪ್ರದರ್ಶನ ಗೊಂಡಿತು.
ಸಮಾರಂಭದ ಬಳಿಕ ಕ್ರೀಡಾಂಗಣದಲ್ಲಿ ಪಂದ್ಯಾಟವನ್ನು ಸಚಿವರು ಹಾಗೂ ಅತಿಥಿಗಳು ಕ್ರೀಡಾಪಟುಗಳಿಗೆ ಶುಭ ಹಾರೈಸುವ ಮೂಲಕ ಚಾಲನೆ ನೀಡಿದರು.
ಪಂದ್ಯಾಟದಲ್ಲಿ ಸುಳ್ಯ ಟೈಗರ್ಸ್, ಅರಂತೋಡು ಬುಲ್ಸ್, ಮೈತ್ರಿ ಫೈಟರ್ಸ್, ಕಲ್ಲುಗುಂಡಿ ಬ್ರದರ್ಸ್, ‌ಮಧುರಾಜ್ ಫ್ರೆಂಡ್ಸ್, ಕುಕ್ಕೇಶ್ರೀ ವಾರಿಯರ್ಸ್
ತಂಡಗಳು ಭಾಗವಹಿಸಿದರು. ಪ್ರೋ ಕಬಡ್ಡಿ ಪಂದ್ಯಾಟದ ಮಾದರಿಯಲ್ಲಿ ಪಂದ್ಯಾಟವನ್ನು ಆಯೋಜಿಸಲಾಗಿತ್ತು.
ಸಂಘದ
ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಸಂಘಟನಾ ಕಾರ್ಯದರ್ಶಿ ಗಳು ಸ್ವಯಂ ಸೇವಕ ರಾಗಿ ಸಹಕರಿಸಿದರು. ಪಂದ್ಯಾಟದ ವೀಕ್ಷಣೆಗಾಗಿ ತಾಲೂಕಿನ ಹಾಗೂ ಹೊರ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಅತಿಥಿಗಳು ಪಂದ್ಯಾಟ ವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ಅದ್ದೂರಿಯ ಪಂದ್ಯಾಟದ ಸಿದ್ಧತೆಯನ್ನು ತಾಲೂಕಿನ ಧ್ವನಿ ಬೆಳಕು ಮತ್ತು ಶಾಮಿಯಾನದ ಮಾಲಕರ ಮತ್ತು ನೌಕರರ ಸೇವೆಯಲ್ಲಿ ನಿರ್ವಹಿಸಲಾಗಿತ್ತು. ರಾತ್ರಿ ವಿಶೇಷವಾಗಿ ಸಂಘದ ಸದಸ್ಯರ ಪ್ರದರ್ಶನ ಪಂದ್ಯಾಟ ಆಕರ್ಷಣೀಯ ವಾಗಿತ್ತು. ಆಗಮಿಸಿದ ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದ ಅಚ್ಚು ಕಟ್ಟಾದ ವ್ಯವಸ್ಥೆ ಜನಮನ್ನಣೆಗೆ ಪಾತ್ರವಾಯಿತು.