ಪಂಜ : ಮೊರಾರ್ಜಿ ದೇಸಾಯಿ ವಸತಿ ಶಾಲಾ ಶಿಕ್ಷಕರು ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

0

ದಕ್ಷಿಣ ಕನ್ನಡ ಜಿಲ್ಲೆಯ ವಸತಿ ಶಾಲೆಗಳ ನೌಕರರ ಕ್ರೀಡಾಕೂಟವು ನ.7 ರಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಲ್ನಾಡು ಪುತ್ತೂರು ಇಲ್ಲಿ ನಡೆಯಿತು. ಈ ಕ್ರೀಡಾಕೂಟದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಈ ಪಂಜ ಇಲ್ಲಿನ ಶಿಕ್ಷಕರಾದ ಕುಸುಮ ಮುತ್ಲಾಜೆ ಇವರು 100 ಮೀ ಓಟ, ಗುಂಡೆಸೆತ, ಚಕ್ರ ಎಸೆತಗಳಲ್ಲಿ ಪ್ರಥಮ, ಭವ್ಯ ಎನ್, 100 ಮೀ ಓಟದಲ್ಲಿ ಪ್ರಥಮ, ಆಶಾ.ಬಿ ಚಕ್ರಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ಮೈಸೂರಿನಲ್ಲಿ ನಡೆಯುವ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.