ಓಂ ಶ್ರೀ ಸಂಜೀವಿನಿ ಗ್ರಾ. ಪಂ. ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ

0
ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ ಇದರ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಸ್ವ ಸಹಾಯ ಸಂಘದ ಸದಸ್ಯರಿಗೆ ವಿವಿಧ ಸ್ಪರ್ಧೆ ಗಳನ್ನು ನ.10 ರಂದು  ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ರಮಣಿ ಕೆ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ನ ಅಧ್ಯಕ್ಷರಾದ ಲಲಿತಾ ಗುಂಡಡ್ಕ, ಸದಸ್ಯರಾದ ವೆಂಕಟೇಶ್ ಎಚ್ ಎಲ್,   ಮೋಹನ್ ಕೋಟಿಗೌಡನಮನೆ, ಸುಜಾತ ಕಲ್ಲಾಜೆ, ಒಕ್ಕೂಟ ದ ಕಾರ್ಯದರ್ಶಿ ಮೀನಾಕ್ಷಿ ಪಿ,ಉಪಸ್ಥಿತರಿದ್ದರು. ಸಂಘದ ಸದಸ್ಯರಿಗೆ ನಾಡಗೀತೆ ಹಾಡುವ ಸ್ಪರ್ಧೆ, ಮತ್ತು ವಿವಿಧ ಸ್ಪರ್ಧೆ ಗಳನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹಾಲು ಉತ್ಪದಕಾರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಶೋಭಾ ನಲ್ಲೂರಾಯ, ಎಂ.ಬಿ.ಕೆ , ಎಲ್ ಸೊ ಆರ್ ಪಿ, ಬಿ.ಸಿ  ಸಖಿ, ಪಶು ಸಖಿ, ಕೃಷಿ ಸಖಿ, ಬಿಆರ್ ಪಿ ಒಕ್ಕೂಟ ದ ಪದಾಧಿಕಾರಿಗಳು, ಸಂಘ ಗಳ ಸದಸ್ಯರು, ಹಾಜರಿದ್ದರು.   ಹೇಮಾವತಿ ನಿರೂಪಣೆ ಮಾಡಿದರು.  ರತ್ನಕುಮಾರಿ ಸ್ವಾಗತಿಸಿದರು. ಬಿಸಿ ಸಖಿ ತ್ರಿವೇಣಿ ದಾಮ್ಲೆ, ಧನ್ಯವಾದ ಮಾಡಿದರು. ಸ್ಪರ್ಧೆ ಯಲ್ಲಿ ವಿಜೇತ ರಿಗೆ, ಬಹುಮಾನ ವಿತರಣೆ ಮಾಡಲಾಯಿತು.