ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ, ಪ್ರಥಮ- ಕುಕ್ಕೇಶ್ರೀ ಸುಬ್ರಹ್ಮಣ್ಯ
ದ್ವಿತೀಯ- ಸುಳ್ಯ ಟೈಗರ್ಸ್
ತೃತೀಯ- ಮೈತ್ರಿ ಫೈಟರ್ಸ್ ಬೆಳ್ಳಾರೆ
ಚತುರ್ಥ- ಮಧುರಾಜ್ ಫ್ರೆಂಡ್ಸ್

0

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಆಯೋಜಿಸಲ್ಪಟ್ಟ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭ ಸಂಘ ದ ಅಧ್ಯಕ್ಷ ಗಿರಿಧರ ಸ್ಕಂದ ರವರ ಅಧ್ಯಕ್ಷತೆಯಲ್ಲಿ ನ.13 ರಂದು ಬೆಳಗ್ಗೆ ನಡೆಯಿತು.
ಸಂಘದ ಗೌರವಾಧ್ಯಕ್ಷ ಎಸ್.ಪಿ.ಲೋಕನಾಥ್ ರವರು ವಿಜೇತರಿಗೆ ಬಹುಮಾನ ವಿತರಿಸಿದರು.ಮುಖ್ಯ ಅತಿಥಿಗಳಾಗಿ ಗುರುಪ್ರಕಾಶ್ ಕೆಟರರ್ಸ್ ಮಾಲಕ ಜಿ.ಜಿ.ನಾಯಕ್ , ಜನತಾ ಗ್ರೂಪ್ಸ್ ಮಾಲಕ ಕೆ.ಎಂ.ಅಬ್ದುಲ್ ಮಜೀದ್, ಸ್ವಾತಿ ಸೌಂಡ್ಸ್ ಮಾಲಕ ಜಯಪ್ರಕಾಶ್ ಸುಳ್ಯ ಉಪಸ್ಥಿತರಿದ್ದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಆಹ್ವಾನಿತ ಆರು ತಂಡಗಳ ಮಧ್ಯೆ ನಡೆದ ಲೀಗ್ ಪಂದ್ಯಾಟದಲ್ಲಿ ಕುಕ್ಕೇಶ್ರೀ ಸುಬ್ರಹ್ಮಣ್ಯ ಪ್ರಥಮ ರೂ.15000 ಮತ್ತು ಟ್ರೋಫಿ , ಸುಳ್ಯ ಟೈಗರ್ಸ್ ದ್ವಿತೀಯ ರೂ.10000 ಮತ್ತು ಟ್ರೋಫಿ, ಮೈತ್ರಿ ಫೈಟರ್ಸ್ ತೃತೀಯ ರೂ.7000 ಮತ್ತು ಟ್ರೋಫಿ, ಮಧುರಾಜ್ ಫ್ರೆಂಡ್ಸ್ ಚತುರ್ಥ ರೂ.5000 ಮತ್ತು ಟ್ರೋಫಿ ಹಾಗೂ ಉತ್ತಮ ಹಿಡಿತಗಾರ ,ಉತ್ತಮ ದಾಳಿಗಾರ, ಆಲ್ರೌಂಡರ್ ಪ್ರಶಸ್ತಿ ನೀಡಲಾಯಿತು.

ಈ ಸಂದರ್ಭದಲ್ಲಿ ಪಂದ್ಯಾಟದ ನಡುವೆ ಸಂಘ ದ ವತಿಯಿಂದ ಆಯೋಜನೆ ಮಾಡಿದ ಲಕ್ಕಿಡಿಪ್ ಕೂಪನ್ ‌ಡ್ರಾ ಸಾರ್ವಜನಿಕವಾಗಿ ನಡೆಸಲಾಯಿತು.

ಕಬಡ್ಡಿ ಪಂದ್ಯಾಟದ ನೇರ ಪ್ರಸಾರವನ್ನು ಸುದ್ದಿ ಯೂ ಟ್ಯೂಬ್ ಚಾನೆಲ್ ನಲ್ಲಿ ಸುಮಾರು 40 ಸಾವಿರಕ್ಕೂ ಮಿಕ್ಕಿ ಮಂದಿ ವೀಕ್ಷಿಸಿದರು.