ಬೆಂಗಳೂರಿನಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಸಮಾಜದಿಂದ ಸಾಂಸ್ಕೃತಿಕ ಕಾರ್ಯಕ್ರಮ

0

ಬೆಂಗಳೂರಿನ ಲಗ್ಗೆರೆಯಲ್ಲಿರುವ ‘ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರ’ದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ಇದರ ವತಿಯಿಂದ ಸಾಂಸ್ಕೃತಿಕ ಸ್ಪರ್ಧೆಗಳನ್ನು ನ.06 ರಂದು ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ನರ್ಸರಿ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಭಾಗವಹಿಸಲು ಅವಕಾಶವಿದ್ದು ಸ್ಥಳದಲ್ಲಿ ಚಿತ್ರ ಬರೆಯುವುದು, ಛದ್ಮವೇಷ, ಸೋಲೋ ಹಾಗೂ ಸಾಮೂಹಿಕ ನೃತ್ಯ, ಸೋಲೋ ಹಾಗೂ ಗ್ರೂಪ್ ಹಾಡು, ಆಶುಭಾಷಣ, ಕಿರುನಾಟಕ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಚರ್ಚಾಸ್ಪರ್ಧೆ, ಸೋಬಾನೆ ಸ್ಪರ್ಧೆ ಇತ್ಯಾದಿ ಅನೇಕ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭರತನಾಟ್ಯ ಗುರು ಶ್ರೀಮತಿ ಡಾ.ಚೇತನಾ ರಾಧಾಕೃಷ್ಣ ಎ ಎಂ, ಪಿಎಚ್ ಡಿ ನೃತ್ಯ ಸ್ಥಾಪಕ ನಿರ್ದೇಶಕರು ಗುರುದೇವ ಲಲಿತಕಲಾ ಅಕಾಡೆಮಿ ರಿಜಿಸ್ಟಾರ್, ಮಂಡ್ಯ ಅವರು ಭಾಗವಹಿಸಿದ್ದರು. ಕೊಡಗು ಮತ್ತು ದ.ಕ ಗೌಡ ಸಮಾಜ, ಬೆಂಗಳೂರು ಇದರ ಅಧ್ಯಕ್ಷರಾದ ರವೀಂದ್ರನಾಥ ಕೇವಳ, ಉಪಾಧ್ಯಕ್ಷರಾದ ಪಾಣತ್ತಲೆ ಪಳಂಗಪ್ಪ, ಕಾರ್ಯದರ್ಶಿಗಳಾದ ನಾಗೇಶ್ ಕಲ್ಲುಮುಟ್ಲು, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಜ್ಯೋತಿ ಕುಶಾಲಪ್ಪ ಪೋರೆಯನ, ಯುವ ಘಟಕದ ಅಧ್ಯಕ್ಷೆ ಶ್ರೀಮತಿ ನೇಹಾ ರೋಷನ್ ಪೋರೆಯನ, ಸಾಂಸ್ಕೃತಿಕ ಸ್ಪರ್ಧೆ ಸಮಿತಿಯ ಅಧ್ಯಕ್ಷ ರಾದ ಗೋಪಾಲಕೃಷ್ಣ ಪಿತ್ತಿಲು, ಗುರುದೇವ್ ಲಲಿತಕಲಾ ಅಕಾಡೆಮಿಯ ವ್ಯವಸ್ಥಾಪಕ ನಿರ್ದೇಶಕರುಗಳಾದ ರಾಧಾಕೃಷ್ಣ ಪಿ ಎಂ ಮೂರ್ಜೆ ಕನಕಮಜಲು ಇವರುಗಳು ವೇದಿಕೆಯಲ್ಲಿದ್ದರು. ಶ್ರೀಮತಿ ನೇಹಾ ರೋಷನ್, ಮಡಿಕೇರಿ ಸುದರ್ಶನ್, ವಿನೋದ್ ಮೂಡಗದ್ದೆ ಹಾಗೂ ರಿತೇಶ್ ನೂಜಿಬೈಲು ಇವರುಗಳು ಕಾರ್ಯಕ್ರಮ ನಿರೂಪಿಸಿದರು. ಪಾಣತ್ತಲೆ ಪಳಂಗಪ್ಪರವರು ವಂದಿಸಿದರು.