ಸುಳ್ಯದ ವಿದ್ಯಾರ್ಥಿಗಳಿಂದ ಮುಂಬಯಿಯಲ್ಲಿ ಭರತನಾಟ್ಯ ನೃತ್ಯ ಪ್ರದರ್ಶನ, ಸುಳ್ಯದ ಭರತನಾಟ್ಯ ಶಿಕ್ಷಕಿ ಶ್ರೀಮತಿ ವಿಂಧ್ಯ ವೈಲಾಯರಿಗೆ ಭಾರತ ಗೌರವ ಪ್ರಶಸ್ತಿ

0

ಸ್ನೇಹ ಯುವ ಸಾಂಸ್ಕೃತಿಕ ಸಂಘ ಬೆಂಗಳೂರು ಮತ್ತು ರಾಮಕೃಷ್ಣ ನೃತ್ಯ ಅಕಾಡೆಮಿ ಮುಂಬೈ ಇದರ ಆಶ್ರಯದಲ್ಲಿ ನ.13 ರಂದು ಮುಂಬೈಯಲ್ಲಿ ನಡೆದ ಕನ್ನಡ ಉತ್ಸವದಲ್ಲಿ ಸುಳ್ಯದ ವಿದ್ಯಾರ್ಥಿಗಳಿಂದ ಭರತನಾಟ್ಯ ನೃತ್ಯ ಪ್ರದರ್ಶನ ನಡೆಯಿತು.


ಸುಳ್ಯ ದ ನೂಪುರ ನಾಟ್ಯ ಸಂಸ್ಥೆ ಮತ್ತು ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಗಳಾದ
ಸಂಜ್ಞಾ ಎ ಅಚ್ರಪ್ಪಾಡಿ, ಕಾರ್ತಿಕಾ ಕೆ.ಎಸ್., ಚಾರಿತ್ರ್ಯ ಕೆ., ಚಿರಾಲಿ ಕೆ., ಮನಸ್ವಿ ಬಿ.ಎಸ್.,ಜನನಿ ಐ .ಎನ್, ನಿವೇದಿತಾ ಐ.ಎನ್, ತನಿಷ್ಕಾ ಎಂ.ಡಿ, ಚಸ್ವಿ ಹೆಚ್.ಎಲ್,ಚಾರ್ವಿ ಕೆ, ತನ್ವಿ ವಿ.ಎಲ್, ತಮನ್ವಿ ವಿ.ಎಲ್,ನಿಧಿ ಉಜಿರೆ ವಿದ್ಯಾರ್ಥಿಗಳು ಭರತನಾಟ್ಯ ನೃತ್ಯ ಪ್ರದರ್ಶನದಲ್ಲಿ ಪಾಲ್ಗೊಂಡರು.ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಸ್ಮರಣಿಕೆ, ಮೆಡಲ್ ನೀಡಿ ಗೌರವಿಸಲಾಯಿತು.


ಈ ಸಂದರ್ಭದಲ್ಲಿ ಸುಳ್ಯದ ಭರತನಾಟ್ಯ ಶಿಕ್ಷಿಕಿ ಶ್ರೀಮತಿ ವಿಂಧ್ಯ ಲಕ್ಷ್ಮೀಶ್ ವೈಲಾಯ ಪುತ್ಯ ರವರಿಗೆ ಭಾರತ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ವೇದಿಕೆಯಲ್ಲಿ ಸ್ನೇಹ ಯುವ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ
ರಂಜಿತ್ ಕುಮಾರ್, ಶ್ರೀಮತಿ ವೈಷ್ಣವಿ ಆಗ್ನಿಹೋತ್ರಿ, ಡಾ.ಸ್ಮಿತಾ
ತಾಡಕ ಮುಂಬೈ, ಶ್ರೀಮತಿ ರೇಖಾ ಬಡಿಗೇರ್, ಶ್ರೀಮತಿ
ಸುಕನ್ಯ ಭಟ್ ಮುಂಬೈ , ಶ್ರೀಮತಿ ಶಾಂತಾ ಉಜಿರೆ, ವಿಕ್ರಂ
ಮಂಗಳೂರು, ಹರೀಶ್ ಶೆಟ್ಟಿ ಮುಂಬೈ ಸೇರಿದಂತೆ ಇನ್ನಿತರರು
ಉಪಸ್ಥಿತರಿದ್ದರು. ಪತ್ರಕರ್ತ ಮಾರುತಿ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು.