ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತ ಬಳ್ಪ ಶಾಲಾ ವಿದ್ಯಾರ್ಥಿಗಳು

0

ಕೆ.ಪಿ.ಎಸ್.ಬೆಳ್ಳಾರೆ ಯಲ್ಲಿ ನ.8ಮತ್ತು ನ.9 ರಂದು ನಡೆದ ತಾಲೂಕು ಮಟ್ಟದ ಆಟೋಟ ಸ್ಪರ್ಧೆಯಲ್ಲಿ 8 ನೇ ತರಗತಿಯ ಸುವರ್ಣ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ, ಸುಕನ್ಯಾ ಚಕ್ರ ಎಸೆತದಲ್ಲಿ ದ್ವಿತೀಯ ಸ್ಥಾನ,ಗೋಕುಲ್ ಅಡೆತಡೆ ಓಟ ಪ್ರಥಮ ಸ್ಥಾನ, ಪ್ರಸಾದ್ ಅಡೆತಡೆ ಓಟ ದ್ವಿತೀಯ ಸ್ಥಾನ,ಶಿಲ್ಪ 600 ಮೀ.ಓಟ ದ್ವಿತೀಯ ಸ್ಥಾನ,7 ನೇ ತರಗತಿಯ ರಕ್ಷಿತಾ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನ,ಪ್ರದೀಪ್ 100 ಮೀ.ಓಟ ತೃತೀಯ ಸ್ಥಾನ, ಅವಿನಾಶ್ 200 ಮೀ.ಓಟ ಪ್ರಥಮ ಮತ್ತು 4×100 ಮೀ.ರಿಲೆ ದ್ವಿತೀಯ ಸ್ಥಾನ ಹಾಗೂ ಶ್ರಾವಣ್,ಗಗನ್,ಪ್ರದೀಪ್ ಇವರು 4×100 ಮೀ.ರಿಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

8 ನೇ ತರಗತಿಯ ಸುಕನ್ಯಾ, ಸುವರ್ಣ, ಗೋಕುಲ್ ಮತ್ತು ಪ್ರಸಾದ್ ಹಾಗೂ 7ನೇ ತರಗತಿಯ ರಕ್ಷಿತಾ,ಅವಿನಾಶ್ ಇವರು ದಿನಾಂಕ ನ.15 ಮತ್ತು ನ.16ರಂದು ಮಂಗಳಾ ಕ್ರೀಡಾಂಗಣದಲ್ಲಿ ನಡೆಯುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.ಪ್ರಾಥಮಿಕ ಬಾಲಕರ ವಿಭಾಗದಲ್ಲಿ ದ್ವಿತೀಯ ತಂಡ ಪ್ರಶಸ್ತಿ ಯು ಲಭಿಸಿರುತ್ತದೆ.