ಮಾಸ್ತಿಕಟ್ಟೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0

ಬೆಳ್ಳಾರೆ ಗ್ರಾಮದ ಮಾಸ್ತಿಕಟ್ಟೆ ಅಂಗನವಾಡಿ ಕೇಂದ್ರ ಮಾಸ್ತಿಕಟ್ಟೆ (ತಡಗಜೆ)ಯಲ್ಲಿ ನ.14 ರಂದು ಮಕ್ಕಳ ದಿನಾಚರಣೆ ನಡೆಸಲಾಯಿತು. ಕಾರ್ಯಕ್ರಮವನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಚಂದ್ರ ಹೆಗ್ಡೆಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಸಮುದಾಯ ಆರೋಗ್ಯ ಅಧಿಕಾರಿಯಾದ ಕುಮಾರಿ ಹವ್ಯಶ್ರೀರವರು ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ ಕೇಂದ್ರದ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.

ಬಾಲವಿಕಾಸ ಸಮಿತಿ ಅಧ್ಯಕ್ಷರು ಶ್ರೀಮತಿ ಭಾರತಿ ಹಾಗೂ ಸದಸ್ಯರು,ಶ್ರೀ ದತ್ತ ಶ್ರೀ ಶಕ್ತಿ ಅಧ್ಯಕ್ಷರು ಹಾಗೂ ಸದಸ್ಯರು ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಸೀತಾ, ಶ್ರೀಮತಿ ಲಲಿತಾ, ಪೋಷಕರು, ಮಕ್ಕಳು ಹಾಗೂ ಅಂಗನವಾಡಿ ಸಹಾಯಕಿ ಶ್ರೀಮತಿ ಗುಲಾಬಿ ಅವರು ಹಾಜರಿದ್ದರು. ಈ ಕಾರ್ಯಕ್ರಮಕ್ಕೆ ಬಹುಮಾನ ಹಾಗೂ ಉಪಹಾರದ ವ್ಯವಸ್ಥೆಯನ್ನು ಶ್ರೀಮತಿ ಪ್ರಿಯಾಂಕ ರೋಹಿತಾಶ್ವ ರೈ ಉಮಿಕ್ಕಳ ಹಾಗೂ ಮೋಹಿನಿ ಮಂಡೇಪುರವರು ಪ್ರಾಯೋಜಿಸಿದರು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಇಂದಿರಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.