ಬಳ್ಪ ಶಾಲೆಯಲ್ಲಿ ಮಕ್ಕಳ ದಿನಾಚರಣೆ

0

ಲಯನ್ಸ್ ಕ್ಲಬ್ ಪಂಜ,
ಬಳ್ಪ ಸರಕಾರಿ ಉನ್ನತೀಕರಿಸಿದ ಶಾಲೆ ಇವರ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ನ.14 ರಂದು ಬಳ್ಪ ಶಾಲೆಯಲ್ಲಿ ಜರುಗಿತು.
ಲಯನ್ಸ್ ಕ್ಲಬ್ ಅಧ್ಯಕ್ಷ ಪುರುಷೋತ್ತಮ ದಂಬೆಕೋಡಿ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಗಿರಿಜಾ, ಎಸ್ ಡಿ ಎಂ ಸಿ ಅಧ್ಯಕ್ಷ ಉಮೇಶ್ ಬುಡೆಂಗಿ ಹಾಗೂ ಲಯನ್ಸ್ ಕ್ಲಬ್ ನಿಕಟ ಪೂರ್ವಾಧ್ಯಕ್ಷ ಸಂತೋಷ್ ಜಾಕೆ, ಕಾರ್ಯದರ್ಶಿ ನಾಗೇಶ್ ಕಿನ್ನಿಕುಮೇರಿ, ಕೋಶಾಧ್ಯಕ್ಷ ‌ಕರುಣಾಕರ ಎಣ್ಣೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಜವಾಹರ್ ಲಾಲ್ ನೆಹರುರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದು ಬಹುಮಾನ ವಿತರಿಸಲಾಯಿತು.‌ಸುಚಿನ್ನ ಕಾಣಿಕೆ ಬಹುಮಾನ ವಿತರಣೆಯಲ್ಲಿ ಸಹಕರಿಸಿದರು.


ಕಾರ್ಯಕ್ರಮದಲ್ಲಿ
ನಾಗೇಶ್ ಕಿನ್ನಿಕುಮೇರಿ ಸ್ವಾಗತಿಸಿದರು ಮತ್ತು ಪ್ರಾಸ್ತಾವಿಕ ಗೈದರು.ಬಹುಮಾನ ವಿಜೇತರ ಪಟ್ಟಿಯನ್ನು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಮೋಹಿನಿ, ಶಿಕ್ಷಕಿ ಗುಲಾಬಿ ಬಹುಮಾನದ ಪಟ್ಟಿ ಯಾಚಿಸಿದರು.ಕರುಣಾಕರ ಎಣ್ಣೆಮಜಲು ವಂದಿಸಿದರು.ಎಸ್ ಡಿ ಎಂ ಸಿ ಸದಸ್ಯರು, ಲಯನ್ಸ್ ಕ್ಲಬ್ ಸದಸ್ಯರು ಪಾಲ್ಗೊಂಡಿದ್ದರು.