ಅರಂಬೂರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ- ಸೋಮವಾರ ಚುಕ್ಕಿ ಚಂದ್ರಮ ಕಾರ್ಯಕ್ರಮ

0

ಅರಂತೋಡು ಪ್ರಾಥಮಿಕ ಆರೋಗ್ಯ ಕೇಂದ್ರದ ಉಪ ಕೇಂದ್ರ ವ್ಯಾಪ್ತಿಯ ಅರಂಬೂರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಮತ್ತು ಆರೋಗ್ಯ ಸೋಮವಾರ ಚುಕ್ಕಿ ಚಂದ್ರಮ ಕಾರ್ಯಕ್ರಮವು ನ.14 ರಂದು ನಡೆಯಿತು. ಆಲೆಟ್ಟಿ ಪಂಚಾಯತ್ ಸದಸ್ಯ ರತೀಶನ್ ಅರಂಬೂರು ರವರು ದೀಪ ಬೆಳಗಿಸಿದರು.


ಅಂಗನವಾಡಿ ಮೇಲ್ವಿಚಾರಕಿ‌ ಶ್ರೀಮತಿ ದೀಪಿಕಾ ಅರಂತೋಡು ವಲಯ ಪ್ರಸ್ತಾವಿಕ ಮಾತನಾಡಿದರು.ಸುಳ್ಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಮಕ್ಕಳ ಶುಚಿತ್ವ, ಕಸ ವಿಲೇವಾರಿ, ಮಧುಮೇಹ, ಜಪಾನೀಸ್ ಎನ್ ಸಫಲೈಟಿಸ್ ಲಸಿಕೆಯ ಕುರಿತು ಮಾಹಿತಿ ನೀಡಿದರು.
ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಲಾವಣ್ಯ ಪಿ.ಪಿ, ಆಶಾ ಕಾರ್ಯಕರ್ತೆ ಶ್ರೀಮತಿ ಸುಮತಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಗೀತಾ ಲಕ್ಷ್ಮಿ, ಪರಿವಾರಕಾನ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸರಸ್ವತಿ, ಅಂಗನವಾಡಿ ಸಹಾಯಕಿ ಶ್ರೀಮತಿ ಗೀತಾ ಹಾಗೂ ಮಕ್ಕಳ ಪೋಷಕರು ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರು, ಸದಸ್ಯರು, ಮಕ್ಕಳು ಭಾಗವಹಿಸಿದ್ದರು. ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳಿಗೆ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು. ಶ್ರೀಮತಿ ಗೀತಾ ಲಕ್ಷ್ಮಿ ಸ್ವಾಗತಿಸಿದರು. ಶ್ರೀಮತಿ ಸರಸ್ವತಿ ವಂದಿಸಿದರು.