ರೋಟರಿ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ರಸಪ್ರಶ್ನೆ, ಪ್ರಬಂಧ ಹಾಗೂ ಭಿತ್ತಿಚಿತ್ರ ರಚನಾ ಸ್ಪರ್ಧೆ

0

ನವೆಂಬರ್ 12 ರಂದು , ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ ಮತ್ತು ರೋಟರಿ ವಿದ್ಯಾಸಂಸ್ಥೆಗಳು , ಸುಳ್ಯ ಇವರ ಸಹಯೋಗದಲ್ಲಿ ರಾಷ್ಟ್ರೀಯ ಮತದಾನ ದಿನಾಚರಣೆಯ ಅಂಗವಾಗಿ ತಾಲೂಕು ಮಟ್ಟದ ರಸಪ್ರಶ್ನೆ, ಪ್ರಬಂಧ ಹಾಗೂ ಭಿತ್ತಿಚಿತ್ರ ರಚನಾ ಸ್ಪರ್ಧೆಯು ರೋಟರಿ ವಿದ್ಯಾಸಂಸ್ಥೆಯಲ್ಲಿ ನಡೆಯಿತು.


ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ರೊ.ಗಿರಿಜಾಶಂಕರ್ ತುದಿ ಯಡ್ಕ ವಹಿಸಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸನ್ಮಾನ್ಯ ಶ್ರೀ ಮಹಾದೇವ ಎಸ್. ಪಿ . ದೀಪ ಬೆಳಗಿಸುವುದರ ಮೂಲಕ ಸಭಾ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿ ಮತದಾನದ ಅವಶ್ಯಕತೆಗಳನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀ .ಚಿನ್ನಪ್ಪ ಮಕ್ಕಳಿಗೆ ಶುಭ ಹಾರೈಸಿದರು .
ಸ್ಪರ್ಧೆಗಳ ನೋಡೆಲ್ ಅಧಿಕಾರಿ , ಶಿಕ್ಷಣ ಸಂಯೋಜಕರಾದ ಶ್ರೀಮತಿ ಸಂಧ್ಯಾ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪರ್ಧೆಗಳ ಸಂಪೂರ್ಣ ಮಾಹಿತಿ ನೀಡಿದರು . ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ, ರೋಟರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆಶ್ರೀಮತಿ ಶೋಭಾ ಬೊಮ್ಮೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪೃಥ್ವಿ ವೈ.ಬಿ ,ಭಗವಾನ್ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರ ಚೊಕ್ಕಾಡಿ ( ಪ್ರಥಮ ), ಕೀರ್ತನಾ ಸಿ.ವಿ. ರೋಟರಿ ಪ್ರೌಢಶಾಲೆ ಸುಳ್ಯ (ದ್ವಿತೀಯ), ಸೃಷ್ಟಿ.ಕೆ.ಎಸ್. ಸರಕಾರಿ ಪದವಿ ಪೂರ್ವ ಕಾಲೇಜು ( ತೃತೀಯ), ಇಂಗ್ಲೀಷ್ ಪ್ರಬಂಧ ಸ್ಪರ್ಧೆಯಲ್ಲಿ ಭೂಮಿಕಾ. ಬಿ.ಪಿ , ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ( ಪ್ರಥಮ), ಹಿತಾ ಶೆಟ್ಟಿ, ರೋಟರಿ ಪ್ರೌಢಶಾಲೆ ಸುಳ್ಯ , ( ದ್ವಿತೀಯ), ಆಫ್ರಾ. ಫಾತಿಮ ಎಂ.ಎ. , ಎನ್.ಎಮ್.ಪಿ.ಯು ಅರಂತೋಡು ( ತೃತೀಯ), ಭಿತ್ತಿಪತ್ರ ರಚನಾ ಸ್ಪರ್ಧೆಯಲ್ಲಿ ನೇಹಾ. ಬಿ. ಕೆ.ಎಸ್. ಗೌಡ, ಪ್ರೌಢಶಾಲೆ ನಿಂತಿಕಲ್ಲು ( ಪ್ರಥಮ) , ಮನಸ್ವಿ ಯು. ಬಿ , ರೋಟರಿ ಪ್ರೌಢಶಾಲೆ ಸುಳ್ಯ ( ದ್ವಿತೀಯ), ಹಂಶಿಕಾ .ಬಿ , ಶಾರದಾ ಹೆಣ್ಣುಮಕ್ಕಳ ಪ್ರೌಢಶಾಲೆ ಸುಳ್ಯ ( ತೃತೀಯ) , ರಸಪ್ರಶ್ನೆ ಸ್ಪರ್ಧೆಯಲ್ಲಿ ದಿಶಾ.ಕೆ.ಜೆ ಮತ್ತು ಫಾತಿಮತ್ ಬುಶ್ರಾ , ಸರಕಾರಿ ಪ್ರೌಢಶಾಲೆ ಎಣ್ಮೂರು ( ಪ್ರಥಮ) , ಕೃತಸ್ವರ ದೀಪ್ತ ಕೆ. ಮತ್ತು ಸುಮೇಧಾ ಡಿ. , ಸರಕಾರಿ ಪ್ರೌಢಶಾಲೆ ಸುಳ್ಯ (ದ್ವಿತೀಯ) , ಅಸ್ಲೇಮಿಯಾ ಟಿ.ಐ ಮತ್ತು ಫಾತಿಮತ್ ಸುಮೈರಾ ತೃತೀಯ ಸ್ಥಾನ ಪಡೆದುಕೊಂಡರು.

ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಸ್ವಾಗತಿಸಿ , ವಿದ್ಯಾರ್ಥಿಗಳಾದ ಸನಿಹ ಶೆಟ್ಟಿ, ವೈಷ್ಣವಿ ಶೆಟ್ಟಿ, ಅನನ್ಯ ಕೆ. ಬಿ . ಪ್ರಾರ್ಥಿಸಿದರು.
ಶಿಕ್ಷಕಿ ಶ್ರೀಮತಿ ನಳಿನಾಕ್ಷಿ , ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.