ಇಂದು ಸುಳ್ಯದಲ್ಲಿ ಶಿವದೂತೆ ಗುಳಿಗೆ ತುಳು ನಾಟಕ ಪ್ರದರ್ಶನ, ಧ್ವನಿ ಬೆಳಕು ಮತ್ತು ಶಾಮಿಯಾನ ಸಂಘದ ಆಯೋಜನೆ

0

ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ವತಿಯಿಂದ ಇಂದು ರಾತ್ರಿ ಗಂಟೆ 8.00 ರಿಂದ ಸುಳ್ಯ ಯುವಜನ ಸಂಯುಕ್ತ ಮಂಡಳಿಯ ಜೆ.ಒ.ಸಿ.ಮೈದಾನದಲ್ಲಿ “ಶಿವದೂತೆ ಗುಳಿಗೆ” ಎಂಬ ವಿಭಿನ್ನ ಶೈಲಿಯ ತುಳು ನಾಟಕ ಪ್ರದರ್ಶನ ನಡೆಯಲಿರುವುದು.
ಕೊಡಿಯಾಲಬೈಲು ವಿಜಯಕುಮಾರ್ ರವರ ನಿರ್ದೇಶನದ ತುಳು ನಾಟಕವು ತುಳು ರಂಗಭೂಮಿಯಲ್ಲಿ ಇತ್ತೀಚಿನ ದಿನಗಳಲ್ಲಿ ಸಂಚಲನ ಮೂಡಿಸಿದೆ. ಕಲಾ ಸಂಗಮ ಕಲಾವಿದರು ರಂಗಭೂಮಿಯಲ್ಲಿ ಪಾತ್ರ ವರ್ಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಯವರು ಹಿನ್ನೆಲೆ ಗಾಯಕರಾಗಿ ಸಹಕರಿಸಿರುತ್ತಾರೆ.
ಸಂಘದ ಆಶ್ರಯದಲ್ಲಿ ನಡೆಯಲಿರುವ ತುಳು ನಾಟಕ ಪ್ರದರ್ಶನವು ಸಂಘದ ಸಹಾಯಾರ್ಥ ವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.