ಸಂಪಾಜೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಸಾಂಸ್ಕೃತಿಕ ಹಬ್ಬ

0


ಸಂಪಾಜೆ ಗ್ರಾಮ ಪಂಚಾಯತ್ ಸುಳ್ಯ ತಾಲೂಕು ದ. ಕ ಹಾಗೂ ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯ ನೇತೃತ್ವದಲ್ಲಿ ಮಾಜಿ ಪ್ರಧಾನಿ ನೆಹರೂ ರವರ ಜನ್ಮದಿನಾಚರಣೆಯ ಅಂಗವಾಗಿ ವಸ್ತು ಪ್ರದರ್ಶನ ಹಾಗೂ 7 ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ತೆಕ್ಕಿಲ್ ಶಾಲಾ ವಠಾರದಲ್ಲಿ ನಡೆಯಿತು.

ವಸ್ತು ಪ್ರದರ್ಶನ ಉದ್ಘಾಟನೆ ಯನ್ನು ಮಾಜಿ ಪಂಚಾಯತ್ ಅಧ್ಯಕ್ಷರಾದ ಕೆ. ಪಿ ಜಗದೀಶ್ ಹಾಗೂ ದಿನಕರ ಸಣ್ಣಮನೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ವಹಿಸಿದ್ದರು.

ಸಭಾ ಕಾರ್ಯಕ್ರಮಕ್ಕೆ ಶಶಿಗೆ ನೀರು ಹಾಕುವ. ಮೂಲಕ 26 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿ ದಾಮೋದರ ಮಾಸ್ಟರ್ ಚಾಲನೆ ನೀಡಿದರು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಡಾ. ಉಮ್ಮರ್ ಬೀಜದಕಟ್ಟೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಕೆ ಮಾಡಿದರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಗದೀಶ್ ರೈ ನೆಹರೂ ಬಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಗೌರವ ಸಲ್ಲಿಸಿದರು. ಸಮಾರೋಪ ಸಮಾರಂಭ ದಲ್ಲಿ ಅತಿಥಿಗಳಾಗಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಧಿಕಾರಿ ಭವಾನಿ ಶಂಕರ್, ಆಗಮಿಸಿ ಸಂಪಾಜೆ ಗ್ರಾಮ ಅಭಿವೃದ್ಧಿಯಲ್ಲಿ ವೇಗವಾಗಿ ಬೆಳೆಯುತ್ತಿರುವ ಗ್ರಾಮ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮಾದರಿ ಗ್ರಾಮವಾಗಿ ಮೂಡಿ ಬಂದಿದೆ ಮಕ್ಕಳ ಕಾರ್ಯಕ್ರಮದ ಮೂಲಕ ಪ್ಲಾಸ್ಟಿಕ್ ಬಳಕೆ, ಕುಡಿಯುವ ನೀರಿನ ಬಳಕೆ, ಮಕ್ಕಳನ್ನು ಶಾಲೆಗೆ ಕಳುಹಿಸದೆ ದುಡಿಸುತ್ತಿರುವ ಬಗ್ಗೆ ನಾಟಕ ಪ್ರದರ್ಶನ ಮಾಡಿರುದಕ್ಕೆ ಶಾಲಾ ಮಕ್ಕಳಿಗೆ ಕ್ರತಜ್ಞತೆ ಸಲ್ಲಿಸಿದರು. ಕ್ಷೇತ್ರ ಶಿಕ್ಷಣಧಿಕಾರಿ ಮಹದೇವ್ ಮಾತನಾಡಿ ನನಗೆ ಸಂಪಾಜೆ ಗ್ರಾಮ ದ ಮೇಲೆ ಪ್ರೀತಿ ಹೆಚ್ಚು ಈ ಪ್ರದೇಶದಲ್ಲಿ ಸಾಹಿತ್ಯ ಹಾಗೂ ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವಿಗಳಿದ್ದಾರೆ. ಉತ್ತಮವಾಗಿ ಕೆಲಸ ಮಾಡುವ ಗ್ರಾಮ ಪಂಚಾಯತ್ ಇದೆ..ಶುಭ ಹಾರೈಕೆ ಮಾಡಿದರು. ಕೆ. ವಿ. ಜಿ. ಆಯುರ್ವೇದ ಕಾಲೇಜ್ ಪ್ರಾಂಶುಪಾಲರಾದ ಡಾ. ಲೀಲಾದರ್ ಮಾತನಾಡಿ ಸಂಪಾಜೆ ಗ್ರಾಮ ಪಂಚಾಯತ್ ಅಭಿವೃದ್ಧಿ ಕಾರ್ಯಕ್ರಮಗಳು ರಾಜ್ಯಕ್ಕೆ ಮಾದರಿಯಾಗಿದೆ. ಎಂದು ಶುಭ ಹಾರೈಕೆ ಮಾಡಿದರು.. ಕಾರ್ಯಕ್ರಮ ದಲ್ಲಿ ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ ಸದಸ್ಯರುಗಳಾದ ಸುಂದರಿ ಮುಂಡ ಡ್ಕ, ಅಬೂಸಾಲಿ ಪಿ. ಕೆ. ಸುಮತಿ ಶಕ್ತಿವೇಲು, ಎಸ್. ಕೆ. ಹನೀಫ್, ರಜನಿ ಶರತ್, ಅನುಪಮಾ, ವಿಮಲಾ, ವಿಜಯಕುಮಾರ್, ತೆಕ್ಕಿಲ್ ಶಾಲಾ ಆಡಳಿತಾಧಿಕಾರಿ ರಹೀಮ್ ಬೀಜದಕಟ್ಟೆ ನಿವೃತ ಶಿಕ್ಷಕ ರಾದ ಚಿದಾನಂದ ಮಾಸ್ಟರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರ ಕಲ್ಲಗದ್ದೆ, ತೆಕ್ಕಿಲ್ ಶಾಲಾಭಿವೃದಿ ಸಮಿತಿ ಅಧ್ಯಕ್ಷರಾದ ದಿನಕರ ಗೌಡ ಸಣ್ಣಮನೆ, ಸೊಸೈಟಿ ನಿರ್ದೇಶಕರಾದ ಯಮುನಾ ಬಿ. ಎಸ್. ಗಣಪತಿಭಟ್, ಗ್ರಾಮ ಕರಣಿಕರಾದ ಮಿಯಾ ಶಾಬ್ ಮುಲ್ಲಾ ಮಾಜಿ ಪಂಚಾಯತ್ ಸದಸ್ಯರಾದ ತಾಜ್ ಮಹಮ್ಮದ್.. ಲಯನ್ಸ್ ಕ್ಲಬ್ ಅಧ್ಯಕ್ಷರಾದ ನಳಿನಿ ಕಿಶೋರ್,ತೆಕ್ಕಿಲ್ ಶಾಲಾ ಮುಖ್ಯ ಗುರುಗಳಾದ ವಾಣಿ, ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಪ್ರಾಥಮಿಕ ಶಾಲಾ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗೂನಡ್ಕ ಪ್ರಥಮ ದ್ವಿತೀಯ ಸವೇರಪುರ ಆಂಗ್ಲಮಾಧ್ಯಮ ಶಾಲೆ ದ್ವಿತೀಯ ಹಾಗೂ ಪ್ರೌಢಶಾಲೆ ವಿಭಾಗದಲ್ಲಿ ಸವೇರಪುರ ಆಂಗ್ಲಮಾಧ್ಯಮ ಶಾಲೆ ಪ್ರಥಮ ಸಮಗ್ರ ಪ್ರಶಸ್ತಿ ಹಾಗೂ ಮಾರುತಿ ಪ್ರೌಢಶಾಲೆ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆಯಿತು. ವೈಯಕ್ತಿಕ ಪ್ರಶಸ್ತಿಯನ್ನು, ಆರ್. ಎಮ್. ಎಸ್. ಎ. ಪ್ರೌಢಶಾಲೆ ಕಲ್ಲುಗುಂಡಿ, ತೆಕ್ಕಿಲ್ ಶಾಲೆ ಗೂನಡ್ಕ, ಸರಕಾರಿ ಶಾಲೆ ಗೂನಡ್ಕ ಪ್ರಶಸ್ತಿ ಪಡೆಯಿತು.ತೆಕ್ಕಿಲ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಟಿ. ಎಮ್. ಶಾಹಿದ್. ತೆಕ್ಕಿಲ್ ಪ್ರಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಕೆ ಮಾಡಿದರು. ರಹೀಮ್ ಬೀಜದಕಟ್ಟೆ ವಂದಿಸಿದರು.ಕಾಂತಿ ಬಿ. ಎಸ್ ಹಾಗೂ ಕಿಶೋರ್ ಬಿ. ಎಸ್. ಕಾರ್ಯಕ್ರಮ ನಿರೂಪಿಸಿದರು ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ಪಿ. ಆರ್, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ, ಗ್ರಾಮ ಸಹಾಯಕ ಸೋಮನಾಥ್ ಲಯನ್ಸ್ ಕ್ಲಬ್ ಸದಸ್ಯ ರಾದ ಕಿಶೋರ್ ಕುಮಾರ್, ಸುರೇಶ್ ಮೆಡಿಕಲ್,ಅಂಗವಿಕಲರ ಅದಿಕಾರಿ ಸುಬ್ರಮಣಿ, ಮಾಜಿ ಮಂಡಲ ಸದಸ್ಯರಾದ ಉಮ್ಮರ್ ಹಾಜಿ ಸಿದ್ದಿಕ್ ಕೊಕ್ಕೋ,ಪಂಚಾಯತ್ ಸಿಬ್ಬಂದಿಗಳಾದ ಸವಿತಾ ಕಿಶೋರ್, ಹರ್ಷಿತ್, ಭರತ್, ಭೋಜಪ್ಪ, ಉಮೇಶ್, ಗುರುವಪ್ಪ, ಸಲೀಂ ಪೆರುಂಗೋಡಿ, ಉಬೈಸ್ ಗೂನಡ್ಕ ವಿವಿಧ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಅಧ್ಯಾಪಕ ವೃoದಾ, ಸ್ತ್ರೀ ಶಕ್ತಿ ಸದಸ್ಯರು, ಆಶಾ ಕಾರ್ಯಕರ್ತರು, ಧರ್ಮಸ್ಥಳ ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು