ಸ್ನೇಹಶ್ರೀ ಮಹಿಳಾ ಮಂಡಲ ವತಿಯಿಂದ ಮಕ್ಕಳ ದಿನಾಚರಣೆ

0


ಬೆಳ್ಳಾರೆಯ ಸ್ನೇಹ ಶ್ರೀ ಮಹಿಳಾ ಮಂಡಲದ ಆಶ್ರಯದಲ್ಲಿ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಬೆಳ್ಳಾರೆ ವಠಾರದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮಕೆ ಸ್ವಾತಿ ಭಟ್ ಕುರುಂಬುಡೆಲು ಚಾಲನೆ ನೀಡಿದರು. ನಂತರ ಮಕ್ಕಳಿಗೆ ವಿವಿಧ ಮನೋರಂಜನ ಸ್ಪರ್ಧೆಗಳನ್ನು ಮಾಡಲಾಯಿತು. ನಂತರ ನಡೆದ ಸಮಾರೋಪ
ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಸ್ನೇಹಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಕುಸುಮ ಕುರುಂಬುಡೇಲು ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬೆಳ್ಳಾರೆ ಗ್ರಾಮ ಪಂಚಾಯತು ಅಧ್ಯಕ್ಷ ಚಂದ್ರಶೇಖರ ಪನ್ನೆ, ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಚಂದ್ರಹಾಸ ಮಣಿಯಾಣಿ, ಬೆಳ್ಳಾರೆ ಜಲದುರ್ಗ ಅರ್ತ್ ಮೂವರ್ಸ್ ಮಾಲಕರಾದ ಪದ್ಮನಾಭ ಬೀಡು, ಬೆಳ್ಳಾರೆ ಮಂಜುನಾಥ ಶಾಮಿಯಾನ ಮಾಲಕರಾದ ನಾಗಪ್ಪ ಕುಲಾಲ್ ಪನ್ನೆ, ಹಾಗೂ ಸ್ನೇಹಿತರ ಕಲಾಸಂಘದ ಅಧ್ಯಕ್ಷರಾದ ವಸಂತ ಉಲ್ಲಾಸ್, ಅಜಪಿಲ ಶ್ರೀ ಮಹಾವಿಷ್ಣು ಮೂರ್ತಿ ಸೇವಾ ಸಮಿತಿ ಅಧ್ಯಕ್ಷರಾದ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ, ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ ಕುರುಂಬುಡೇಲು ಉಪಸ್ಥಿತರಿದ್ದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಶ್ರೇಯಾ ಕುರುಂಬುಡೆಲು, ಅನ್ವಿತಾ ಪೆರುವಾಜೆ ಪ್ರಾರ್ಥಿಸಿ, ಪೂರ್ವ ಅಧ್ಯಕ್ಷೆ ಪೂರ್ಣಿಮಾ ಪಡ್ಪೂ ಸ್ವಾಗತಿಸಿ, ಕಾರ್ಯದರ್ಶಿ ಸೌಮ್ಯ ಮೂಡಾಯಿತೋಟ ವಂದಿಸಿ , ಶೋಭಾ ಕುರುಂಬುಡೇಲು ಕಾರ್ಯಕ್ರಮ ನಿರೂಪಿಸಿದರು.