ಚೆಂಬು : ಸಂಜೀವಿನಿ ಒಕ್ಕೂಟದ ವ್ಯಾಪಾರ ಮಳಿಗೆ ಆರಂಭ

0

ಚೆಂಬು ಗ್ರಾಮದ ಬಾಲoಬಿಯಲ್ಲಿ ಗ್ರಾಮದ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟವಾದ ಸಂಜೀವಿನಿ ಒಕ್ಕೂಟದ ವ್ಯಾಪಾರ ಮಳಿಗೆಯು ನ. 14ರಂದು ಆರಂಭವಾಯಿತು.

ವೈದಿಕರಾದ ನರಸಿಂಹ ಭಟ್ ರವರು ಗಣಪತಿಹೋಮ ನೆರವೇರಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ರೇಖಾಅರುಣೋದಯಕುಮಾರ್, ಒಕ್ಕೂಟದ ಎಂ. ಬಿ. ಕೆ ರೇಖಾ, ಎಲ್. ಸಿ. ಆರ್. ಪಿ. ಸುಮಿತ್ರಾರಾಮಮೂರ್ತಿ ಖಜಾಂಜಿ ಗೀತಾoಜಲಿ, ವಿಮಲಾ, ಗ್ರಾಮಪಂಚಾಯತ್ ಸದಸ್ಯರಾದ ಆದಮ್ ಕುಂಞಿ, ಆನಂದ ತಾಮೃಕಟ್ಟೆ, ಯುವಕೇಸರಿ ಬಳಗ, ಬಾಲoಬಿ ಇದರ ಪದಾಧಿಕಾರಿಗಳು ಮತ್ತು ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಮಳಿಗೆಯಲ್ಲಿ ಸ್ಥಳೀಯವಾಗಿ ತಯಾರಿಸಿದ ಗ್ರಹೋಪಯೋಗಿ ವಸ್ತುಗಳು, ತಿಂಡಿತಿನಿಸುಗಳು, ಉಪ್ಪಿನಕಾಯಿ, ಮತ್ತು ಇನ್ನಿತರ ವಸ್ತುಗಳು ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.