ಚೆಂಬು : ಶ್ರೀ ಭಗವಾನ್ ಸಂಘದಿಂದ ನೆಹರೂ ಯುವ ಕೇಂದ್ರ ಸಂಸ್ಥಾಪನಾ ದಿನಾಚರಣೆ

0

ಶ್ರೀ ಭಗವಾನ್ ಸಂಘ (ರಿ) ಚೆಂಬು ,ಕೊಡಗು ,ಇವರಿಂದ  ಪಂಡಿತ್ ಜವಾಹರಲಾಲ್ ನೆಹರೂ ಜನ್ಮ ದಿನಾಚರಣೆಯಂದು ನೆಹರು ಯುವ ಕೇಂದ್ರ ಸಂಘಟನೆಯ ಸಂಸ್ಥಾಪನಾ ದಿನಾಚರಣೆಯನ್ನು ನವೆಂಬರ್14 ರಂದು ಚೆಂಬು ಗ್ರಾಮದ ಬಾಲಂಬಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಮಾಜಿ ಎಪಿಎಂಸಿ ಉಪಾಧ್ಯಕ್ಷರಾದ ಶ್ರೀ ಅನಂತ್ ಊರುಬೈಲು ರವರು ಮಾತನಾಡಿ ,ದೇಶದಾದ್ಯಂತ ವಿಸ್ತರಿಸಿರುವ ನೆಹರು ಯುವ ಕೇಂದ್ರ ಸಂಘಟನೆಯು ದೇಶದ ಯುವಶಕ್ತಿಯ ಪ್ರತೀಕವಾಗಿದ್ದು ,ಯುವಶಕ್ತಿಯು ಸಮಾಜಮುಖಿ ಕಾರ್ಯಗಳನ್ನು ಮಾಡಲು ಪ್ರೇರಕ ಮತ್ತು ಪ್ರೋತ್ಸಾಹಿಸುವ ಶಕ್ತಿಯಾಗಿ ಕೆಲಸ ಮಾಡುತ್ತಿದೆ ಎಂದರು.ಹಾಗೆಯೇ ಮಡಿಕೇರಿ ನೆಹರು ಯುವ ಕೇಂದ್ರವು ಯುವಶಕ್ತಿ ಸಬಲೀಕರಣ ಉದ್ದೇಶದಿಂದ ಕಾರ್ಯಕ್ರಮ ಆಯೋಜನೆ ,ಪ್ರೋತ್ಸಾಹ ಧನ ,ಪ್ರಶಸ್ತಿ ಪತ್ರಗಳ ಮೂಲಕ ಯುವಕಸಂಘಗಳನ್ನು ಬೆಂಬಲಿಸುತ್ತರುವುದನ್ನು ಸ್ಮರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅದ್ಯಕ್ಷ ಯತೀಶ್ ಹನಿಯಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೊಸೈಟಿ ನಿರ್ದೇಶಕ ದಿನೇಶ್ ಸಣ್ಣಮನೆ ,ಗ್ರಾ.ಪಂ.ಮಾಜಿ ಅದ್ಯಕ್ಷ ಆದಂ ಸೆಂಟ್ಯಾರ್ ,ಅಟಲ್ ಜಿ ಜನಸ್ನೇಹಿ ಕೇಂದ್ರದ ರೋಹಿತ್ ಹೊಸೂರು ಭಾಗವಹಿಸಿದ್ದರು.ರವಿರಾಜ ಹೊಸೂರು ಕಾರ್ಯಕ್ರಮ ನಿರೂಪಿಸಿದರು.


ಈ ಸಂದರ್ಭದಲ್ಲಿ ನೆಹರೂ ರವರ ಬಾವಚಿತ್ರಕೆ ಪುಷ್ಪಾರ್ಚನೆ ಮಾಡಲಾಯಿತು ಮತ್ತು ಸಸಿಗಳನ್ನು ನೆಡಲಾಯಿತು.ಭಗವಾನ್ ಸಂಘದ ಸದಸ್ಯರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.